ನವದೆಹಲಿ: ಹಿಜಬ್ ಹೆಸರಿನಲ್ಲಿ ಮಕ್ಕಳಿಗೆ ವಿಭಜನೆ ವಿಷವನ್ನು ತಿನ್ನಿಸಬಾರದು ಎಂದು ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಶಾಲೆಗಳಲ್ಲಿ ಡ್ರೆಸ್ ಕೋಡ್‍ನಲ್ಲಿ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೀವು ಧರಿಸುವ ಹಿಜಬ್, ಬುರ್ಖಾ, ಸೀರೆ ಮತ್ತು ನೀವು ತಿನ್ನುವ ಖಿಚಡಿ ಅಥವಾ ಬಿರಿಯಾನಿ ಎಲ್ಲವೂ ಮಣ್ಣಿನಿಂದ ಬರುತ್ತದೆ. ಆದ್ದರಿಂದ ಮಣ್ಣಿಗೆ ಅದ್ಭುತವಾಗಿ ಒಂದುಗೂಡಿಸುವ ಶಕ್ತಿಯಿದೆ. ನಮ್ಮನ್ನು ಒಟ್ಟಿಗೆ ಸೇರಿಸುವ ಜೀವನದ ಅಂಶಗಳನ್ನು ನೋಡುವ ಬದಲು, ನಾವು ನಿರಂತರವಾಗಿ ನಮ್ಮನ್ನು ವಿಭಜಿಸುವ ಅಂಶಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ
Advertisement
Advertisement
ಮಣ್ಣು ಸಾರ್ವತ್ರಿಕ ವಸ್ತುವಾಗಿದೆ. ನೀವು ಯಾರು, ಯಾವ ಧರ್ಮ, ಜನಾಂಗ, ರಾಷ್ಟ್ರೀಯತೆಗೆ ಸೇರಿದವರು ಎಂಬುದು ಮುಖ್ಯವಲ್ಲ. ನೀವು ಮಣ್ಣಿನಿಂದ ಬಂದು, ಮರಳಿ ಮಣ್ಣಿಗೆ ಹೋಗುತ್ತೀರಾ. ಆದ್ದರಿಂದ ಇದು ಮಣ್ಣು ಒಂದು ಪ್ರಮುಖ ಒಗ್ಗೂಡಿಸುವ ಮೂಲವಾಗಿದೆ. ಹಿಂದಿನ ಪೀಳಿಗೆಯವರು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಸಬಾರದು. ನೀವು ಶಾಲೆಗಳಲ್ಲಿದ್ದಾಗ ನಿಮ್ಮನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಮಕ್ಕಳಿಗೆ ನೀವು ಹಿಜಬ್ ಹೆಸರಿನಲ್ಲಿ ಭಜನೆಯ ವಿಷವನ್ನು ತಿನ್ನಿಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ
Advertisement
ಹಿಂದಿನ ಪೀಳಿಗೆಯ ಜನರಂತೆ ಮಕ್ಕಳು ಬೆಳೆಯಬೇಕು ಎಂದಿಲ್ಲ. ನಮ್ಮಲ್ಲಿ ಯಾವುದೇ ಪೂರ್ವಾಗ್ರಹಗಳು, ಸಮಸ್ಯೆಗಳು, ದ್ವೇಷ ಅಥವಾ ಪ್ರೀತಿ ಇರಲಿ ಇದನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರಬಾರದು. ನೀವು ಬದುಕಿದ ಪೂರ್ವಾಗ್ರಹಗಳೊಂದಿಗೆ ಮಕ್ಕಳು ಬೆಳೆಯಬಾರದು ಎಂದಿದ್ದಾರೆ.