ಕೊಪ್ಪಳ: ಅದು ವಿದೇಶಿ ಪ್ರವಾಸಿಗರ ಸ್ವರ್ಗದ ತಾಣ. ಅಲ್ಲಿನ ಸೂರ್ಯಾಸ್ತ ನೋಡಲು ದೇಶ, ವಿದೇಶದಿಂದ ಜನರು ಬರುತ್ತಾರೆ. ಅಲ್ಲಿಗೆ ಕೆಲವು ಶಾಲಾ ಮಕ್ಕಳು ಬಂದು ಟೀ ಮಾರಿಕೊಂಡು ಸಂಪಾದನೆ ಮಾಡುತ್ತಾರೆ. ಜೊತೆಗೆ ಭರ್ಜರಿಯಾಗಿ ಇಂಗ್ಲಿಷ್ ಭಾಷೆಯಲ್ಲಿ ಸರಾಗವಾಗಿ ಮಾತನಾಡಿಕೊಂಡು ವ್ಯವಹಾರ ನಡೆಸುತ್ತಾರೆ.
ಜಿಲ್ಲೆಯ ವಿರುಪಾಪುರ ಗಡ್ಡೆಯಲ್ಲಿ ಸೂರ್ಯ ಮುಳುಗೋದನ್ನ ನೋಡೋದೇ ಒಂದು ರೀತಿ ಖುಷಿ. ಪಶ್ಚಿಮ ಘಟ್ಟದ ಆಗುಂಬೆಯಲ್ಲಿ ಮಳೆಗಾಲ, ಚಳಿಗಾಲದಲ್ಲಿ ಸೂರ್ಯಾಸ್ತಮ ಕಾಣಿಸಲ್ಲ. ಆದರೆ ವಿರುಪಾಪುರ ಗಡ್ಡೆಯಲ್ಲಿ ವರ್ಷವಿಡಿ ಸೂರ್ಯ ಮುಳುಗೋ ಸನ್ನಿವೇಶವನ್ನು ಕಣ್ತುಂಬಿಕೊಳ್ಳಬಹುದು.
Advertisement
Advertisement
ಇಂತಹ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳೋಕೆ ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಬಂದವರನ್ನೆಲ್ಲಾ ಇಂಗ್ಲಿಷ್‍ನಲ್ಲೇ ಮಾತನಾಡಿಸುತ್ತಾ ಟೀ, ಲೆಮನ್ ಟೀ, ಜ್ಯೂಸ್ ಮತ್ತು ನೀರಿನ ಬಾಟಲ್ ಸೇಲ್ ಮಾಡುತ್ತಾರೆ ವಿರುಪಾಪುರ ಗಡ್ಡೆಯ ಸುತ್ತಮುತ್ತಲಿನ ಗ್ರಾಮದ ಮಕ್ಕಳು.
Advertisement
ನಾವು ಬರೀ ಟೀ ಮಾರಾಟ ಮಾಡಲ್ಲ. ಬೆಳಗ್ಗಿನಿಂದ ಶಾಲೆಯಲ್ಲಿ ಪಾಠ ಕಲಿತು ಮನೆಗೆ ಬರುತ್ತೇವೆ. ಸಂಜೆ ಟೀ ಮಾರಾಟ ಮಾಡಿ ಮನೆಯವರಿಗೆ ಹಣಕಾಸಿಗೆ ಬೆನ್ನೆಲುಬಾಗಿ ದುಡೀತ್ತೀವಿ. ಸರಿಸುಮಾರು 10 ರಿಂದ 15 ಮಕ್ಕಳು ಹೀಗೆ ಟೀ ಮಾರುತ್ತಾ ಶಿಕ್ಷಣದ ಜೊತೆಗೆ ಬದುಕು ಕಟ್ಟಿಕೊಳ್ಳುವ ವ್ಯವಹಾರನೂ ಕೂಡ ಕಲಿತ್ತಿದ್ದೇವೆ ಎಂದು ಟೀ ಮಾರುವ ವಿದ್ಯಾರ್ಥಿ ಆಕಾಶ್ ನಾಯಕ್ ಹೇಳುತ್ತಾನೆ.
Advertisement
ದೊಡ್ಡವರು ಸುಮ್ಮನೆ ಹೇಳ್ತಾರ ಹಾಡ್ತಾ ಹಾಡ್ತಾ ರಾಗ ಅಂತಾ. ಒಟ್ಟಿನಲ್ಲಿ ಹಂಪಿ, ಆನೆಗುಂದಿ ಸುತ್ತಲಿನ ನಿಸರ್ಗ ಸಂಪತ್ತು ಪ್ರವಾಸಿ ತಾಣವಾಗಿರದೇ ಬಡ ಮಕ್ಕಳಿಗೂ ಬದುಕು ಕಟ್ಟಿಕೊಡುತ್ತಿದೆ.