ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ 1ರಿಂದ 5ನೇ ತರಗತಿವರೆಗೂ ಶಾಲೆಗಳನ್ನು ಪುನಾರಂಭಗೊಳ್ಳುತ್ತಿದ್ದು ಶಾಲೆಗಳನ್ನು ತೆರೆಯಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ.
Advertisement
ಕೊರೊನಾ 3ನೇ ಅಲೆ ಭೀತಿ ನಡುವೆ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ತಜ್ಞರ ಸಲಹೆ ಮೇರೆಗೆ ಸೋಮವಾರದಿಂದ ಶಾಲೆಯನ್ನು ಪುನಾರಂಭಿಸಲಾಗುತ್ತಿದೆ. ಅಲ್ಲದೇ ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವಾರು ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವಂತೆ ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ರಾಮನ ದ್ರೋಹಿಗಳಿಂದ ಅಂತರ ಕಾಯ್ದುಕೊಳ್ಳಿ: ಯೋಗಿ ಆದಿತ್ಯನಾಥ್
Advertisement
Advertisement
ಪೋಷಕರು ಹಾಗೂ ಶಿಕ್ಷಕರ ಮೇಲೆ ಜವಾಬ್ದಾರಿ ಹೆಚ್ಚಾಗಿದ್ದು, ಶಾಲೆಗೆ ಬರುವ ಮಕ್ಕಳ ಮೇಲೆ ನಿಗಾ ವಹಿಸಬೇಕಾಗುತ್ತದೆ ಮತ್ತು ಮಕ್ಕಳಲ್ಲಿ ಕೊರೊನಾ ಕುರಿತಂತೆ ಭಯದ ಬದಲು ಜಾಗೃತಿ ಮೂಡಿಸಿ, ಕೊರೊನಾ ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕಾಗಿರುತ್ತದೆ. ಇದನ್ನೂ ಓದಿ: ಬೆಂಕಿಪೊಟ್ಟಣದ ಬೆಲೆ ಏರಿಕೆ
Advertisement
ಸರ್ಕಾರದ ಪೊರ್ಟೊಕಾಲ್ ಮಾತ್ರವಲ್ಲದೇ ತಜ್ಞರಾದ ಡಾ. ಪ್ರಸಾದ್, ಡಾ. ದಿವ್ಯಾ ಚಂದ್ರಾದರ್, ಡಾ. ಪ್ರಸನ್ನ ಅವರು ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.ಅವು ಈ ಕೆಳಗಿನಂತಿದೆ. ಇದನ್ನೂ ಓದಿ: ಖಾರವಾದ ಚಿಕನ್ 65 ಮಾಡಿ ನಾಲಿಗೆ ರುಚಿ ಹೆಚ್ಚಿಸಿ
*ಕೊರೊನಾ ಕಾಯಿಲೆಯ ಭೀಕರತೆ ಬಗ್ಗೆ ಮಕ್ಕಳಿಗೆ ಹರಿವು ಮೂಡಿಸಬೇಕು.
*ಮನೆಯ ಮೊದಲ ಪಾಠ ಶಾಲೆ
*ಈಗಾಗಲೇ 6 ರಿಂದ 10 ನೇ ತರಗತಿ ಮಕ್ಕಳಿಗೆ ಆಫ್ ಲೈನ್ ಕ್ಲಾಸ್
*ನಾಳೆಯಿಂದ 1ರಿಂದ 5 ನೇ ತರಗತಿಯ ಪುಟಾಣಿಗಳಿಗೆ ಆಫ್‍ಲೈನ್ ಕ್ಲಾಸ್
*ಕ್ಲಾಸ್ ರೂಮ್‍ನಲ್ಲಿ ಮಾತ್ರವಲ್ಲ, ಸ್ಕೂಲ್‍ಗೆ ಹೋಗಿ ಬರುವವರೆಗೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವಂತೆ ತಿಳಿಸಬೇಕು.
*ಅದೇ ರೀತಿ ಸಾಮಾಜಿಕ ಅಂತರದ ಬಗ್ಗೆಯೂ ಎಚ್ಚರಿಕೆವಹಿಸಬೇಕು.
* ಮನೆಯಿಂದಲೇ ಊಟದ ಬಾಕ್ಸ್ ನೀಡಬೇಕು.
* ವಾಟರ್ ಬಾಟಲ್ ಬಹಳ ಮುಖ್ಯ.
* ಊಟದ ಸಮಯದಲ್ಲೂ ಮಕ್ಕಳು ಸಾಮಾಜಿಕ ಅಂತರ ಬಹಳ ಮುಖ್ಯ.
* ಮಕ್ಕಳ ಶಿಕ್ಷಕರ ಜೊತೆ ಸಂವಹನ ಸಂಪರ್ಕ ಹೊಂದಬೇಕು.
* ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಅಷ್ಟೇಕ್ಕೆ ಮಕ್ಕಳನ್ನು ಸ್ಟಿಕ್ ಆನ್ ಮಾಡಿಸಬೇಕು.
* ಶಾಲೆಯಿಂದ ಹೊರಟ ಮಗುವಿನ ಹೊಣೆ ಪೋಷಕರದ್ದು.
* ಶಾಲೆಯಿಂದ ಹೊರಡುವ ಮಕ್ಕಳು ಹೊರಗಡೆ ಗುಂಪು ಸೇರುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಕ್ಕಳು ಶಾಲೆಯಿಂದ ಹೊರಟ ಮೇಲೆ ಮನೆಗೆ ಬರುವಂತೆ ನಿಗಾವಹಿಸಬೇಕು.
* ಮಕ್ಕಳಿಗೆ ಆದಷ್ಟು ಸಾತ್ವಿಕ ಮತ್ತು ಪೌಷ್ಟಿಕಾಂಶದ ಆಹಾರ ನೀಡಬೇಕು.
ಶಿಕ್ಷಕರಿಗೆ ನೀಡಿರುವ ಸಲಹೆಗಳು:
*ತರಗತಿಯಲ್ಲಿ ಮಕ್ಕಳು ಕೊರೊನಾ ರೂಲ್ಸ್ ಫಾಲೋ ಮಾಡುವಂತೆ ನೋಡಿಕೊಳ್ಳಬೇಕು.
* ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಸರ್ ಬಳಕೆ ಮಾಡುವಂತೆ ಪದೇ ಪದೇ ತಿಳಿಹೇಳಬೇಕು.
* ವಿದ್ಯಾರ್ಥಿಗಳ ತರಗತಿಯ ಹೊರಗೂ ನಿಯಮ ಪಾಲನೆ ಮಾಡ್ತಿದ್ದಾರಾ ಅನ್ನೋದರ ಮೇಲ್ವಿಚಾರಣೆ ಮಾಡುತ್ತಿರಬೇಕು.
* ಪೋಷಕರ ದೂರವಾಣಿ ನಂಬರ್ ಪಡೆದು ಮಕ್ಕಳು ಶಾಲೆಯಿಂದ ಹೊರಟ ಮೇಲೆ ಪೋಷಕರಿಗೆ ತಿಳಿಸಬೇಕು.
* ಊಟದ ಸಮಯದಲ್ಲಿ ಮಕ್ಕಳ ಜೊತೆಯಲ್ಲಿ ಶೇರಿಂಗ್ ಮಾಡಿಕೊಂಡು ಊಟ ಮಾಡೋದು ಸಾಮಾನ್ಯ. ಆದರೇ ಈ ಸಮಯದಲ್ಲಿ ಅದು ಆಗದಂತೆ ಶಿಕ್ಷಕರು ನಿಗಾವಹಿಸಬೇಕು.
* ಪ್ರತಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನ ಇರಬೇಕು.
* ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳು ಯಾವುದಾದರೂ ಕಂಡುಬಂದ್ರೇ ಕೂಡಲೇ ಅಂತಹ ವಿದ್ಯಾರ್ಥಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.
* ಅಂತಹ ಮಕ್ಕಳಿಗೆ ಕೋವಿಡ್ ಟೆಸ್ಟ್ ರಿಪೋರ್ಟ್ ಬರುವವರೆಗೆ ವಿದ್ಯಾರ್ಥಿಗೆ ರಜೆ ನೀಡಬೇಕು.
* ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಕೊರೊನಾದ ಬಗ್ಗೆ ಹರಿವು ಮೂಡಿಸಬೇಕು.
* ತರಗತಿಯ ಹೊರಗೆ ಮಕ್ಕಳು ಹೇಗೆ ಇರುತ್ತಾರೆ ಅನ್ನೋದು ಬಹಳ ಮುಖ್ಯ.
* ಅದಕ್ಕಾಗಿ ಮಕ್ಕಳ ಚಲನವಲನದ ಬಗ್ಗೆ ನಿಗಾವಹಿಸಬೇಕು.