ರಾಗಿ ಹಾಗೂ ಬಾಳೆಹಣ್ಣು ಬಳಸಿ ಮಾಡಲಾಗೋ ಈ ದೋಸೆ ರುಚಿಕರವಾಗಿದ್ದು ಮಕ್ಕಳು ಇದನ್ನು ಇಷ್ಟಪಟ್ಟು ಸವಿಯುತ್ತಾರೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ನಾರಿನಂಶ ಹೇರಳವಾಗಿರೋ ರಾಗಿ ಮಕ್ಕಳಿಗಂತೂ ಅತ್ಯುತ್ತಮ ಆಹಾರ. ಬಾಳೆಹಣ್ಣು ಬಳಸಿ ಈ ದೋಸೆಯನ್ನು ಸಿಹಿಯಾಗಿಯೂ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ ಸುಲಭವಾಗಿ ಮಾಡಬಹುದಾದ ರಾಗಿ, ಬಾಳೆಹಣ್ಣಿನ ದೋಸೆ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ರಾಗಿ ಹಿಟ್ಟು – ಅರ್ಧ ಕಪ್
ಬಾಳೆಹಣ್ಣು – 1
ಸಕ್ಕರೆ – 3 ಟೀಸ್ಪೂನ್
ತೆಂಗಿನ ತುರಿ – ಕಾಲು ಕಪ್
ನೀರು – ಅರ್ಧ ಕಪ್
ಹೆಚ್ಚಿದ ಗೋಡಂಬಿ – 2 ಟೀಸ್ಪೂನ್ ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಹಾಕಿ ಫೋರ್ಕ್ ಸಹಾಯದಿಂದ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ.
* ಅದಕ್ಕೆ ರಾಗಿ ಹಿಟ್ಟು, ಸಕ್ಕರೆ, ನೀರು, ತೆಂಗಿನ ತುರಿ, ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈ ಹಿಟ್ಟಿಗೆ 10 ನಿಮಿಷ ವಿಶ್ರಾಂತಿ ನೀಡಿ.
* ಈಗ ಬಿಸಿ ತವಾಗೆ ಒಂದು ಸೌಟಿನಷ್ಟು ಹಿಟ್ಟನ್ನು ಸುರಿಯಿರಿ. ಇದನ್ನು ತೆಳ್ಳಗೆ ಹರಡುವುದು ಬೇಡ. ದೋಸೆ ದಪ್ಪವಾಗಿದ್ದರೆ ಉತ್ತಮ.
* ದೋಸೆ ಒಂದು ಬದಿ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಮತ್ತೊಂದು ನಿಮಿಷ ಬೇಯಿಸಿಕೊಳ್ಳಿ.
* ಉಳಿದ ದೋಸೆಯ ಹಿಟ್ಟನ್ನು ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಇದೀಗ ಮಕ್ಕಳು ಇಷ್ಟಪಟ್ಟು ಸವಿಯೋ ರಾಗಿ, ಬಾಳೆಹಣ್ಣಿನ ದೋಸೆ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಮನೆಯಲ್ಲೇ ಮಾಡ್ನೋಡಿ ಅಂಜೂರ, ಖರ್ಜೂರ ಬರ್ಫಿ
Advertisement
Web Stories