ಬೆಂಗಳೂರು: ಪ್ರತಿ ಭಾರೀ ದೀಪಾವಳಿ ಬಂದಾಗಲೂ ಪಟಾಕಿ ಹೊಡೆಯುವಾಗ ಹುಷಾರು ಅಂತ ಸಾಕಷ್ಟು ಎಚ್ಚರಿಕೆ ನೀಡ್ತಾರೆ. ಆದ್ರು ಇಬ್ಬರು ಮಕ್ಕಳು ಪಟಾಕಿ ಹೊಡೆದು ಕಣ್ಣು ಸುಟ್ಟುಕೊಂಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹಬ್ಬದ ಮೊದಲನೆ ದಿನವೇ ಇಬ್ಬರು ಮಕ್ಕಳು ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಟನ್ ಪೇಟೆಯ 10 ವರ್ಷದ ಭುವೇಶ್‍ಗೆ ಪಟಾಕಿ ಕಿಡಿ ಎಡಗಣ್ಣಿಗೆ ತಾಗಿ ಗಾಯವಾಗಿದೆ. ಇನ್ನು ಆಡುಗೋಡಿ ನಿವಾಸಿ ಶಾರುಕ್ ಅನ್ನೊ ಯುವಕ ಕೆಲಸ ಮುಗಿಸಿ ಮನೆಗೆ ಬರುವಾಗ ಯಾರೋ ಹಚ್ಚಿದ ರಾಕೆಟ್‍ನಿಂದ ತನ್ನ ಎಡಗಣ್ಣನ್ನ ಕಳೆದುಕೊಂಡಿದ್ದಾರೆ.
ಎಂವಿ ಗಾರ್ಡನ್ ನಿವಾಸಿಯಾದ 9 ವರ್ಷದ ವಿಲಿಯಂ ಪಟಾಕಿ ಸಿಡಿತದಿಂದ ಮುಖದ ಮೇಲೆ ಗಾಯ ಮಾಡಿಕೊಂಡಿದ್ದಾನೆ. ಈತ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೋಷಕರೇ ನಿಮ್ಮ ಮಕ್ಕಳಿಗೆ ಪಟಾಕಿ ಕೊಡೋ ಮುನ್ನ ಈ ಸ್ಟೋರಿ ಓದಿ https://t.co/NeVEMkrxP3#Bellary #Crackers #Deepavali pic.twitter.com/cxJObJWgul
— PublicTV (@publictvnews) October 18, 2017