– ರಾಜ್ಯದಲ್ಲೇ ಮೊದಲ ಬಾರಿಗೆ ಜಿ.ಪಂ.ನಿಂದ ವಿನೂತನ ಪ್ರಯೋಗ
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ತೂಕಕ್ಕಿಂತ ಅವರ ಶಾಲೆಗೆ ತೆಗೆದುಕೊಂಡು ಹೋಗುವ ಬ್ಯಾಗ್ ತೂಕವೇ ಹೆಚ್ಚಿರುತ್ತದೆ. ಈ ವಿಚಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ವಲ್ಪ ರಿಲೀಫ್ ಸಿಗಲಿದೆ.
ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತರಾಗಬೇಕು ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಬ್ಯಾಗ್ ಲೆಸ್ ಡೇ ಆರಂಭಿಸಿದೆ.
Advertisement
ಮುಂದಿನ ಜುಲೈ ತಿಂಗಳಿನಿಂದ ಮೊದಲ ಹಂತವಾಗಿ ಜಿಲ್ಲೆಯ 1 ರಿಂದ 7 ನೇ ತರಗತಿಯ ಸರ್ಕಾರಿ ಕಿರಿಯ-ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಬ್ಯಾಗ್ ಲೆಸ್ ಡೇ ಆಚರಣೆ ಮಾಡಲು ತಯಾರಿ ನಡೆದಿದೆ. ಹೀಗಾಗಿ ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ಕೊನೆಯ ಶನಿವಾರದಂದು ಬ್ಯಾಗ್ ಬಿಟ್ಟು ವಿದ್ಯಾರ್ಥಿಗಳು ಶಾಲೆಗೆ ಬರಬೇಕಿದೆ. ಆ ದಿನಗಳಂದು ಕ್ರೀಡೆ, ನೃತ್ಯ, ಚಿತ್ರ ಕಲೆ, ಕೈ ತೋಟ ಮಾಡುವುದು ಸೇರಿದಂತೆ ವಿನೂತನ ಚಟುವಟಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ.
Advertisement
ಶಿಕ್ಷಣ ವ್ಯವಸ್ಥೆಯಲ್ಲಿ ಬರೀ ಓದು, ಓದು ಅಂತ ಬೆಳಗ್ಗೆ ಎದ್ದಾಗಿಂದ ಸಂಜೆ ಟ್ಯೂಷನ್ ಮುಗಿಯೋವರೆಗೂ ಮಕ್ಕಳು ಓದುತ್ತಲೇ ಇರುತ್ತವೆ. ಈ ನೋಟ್ಸ್, ಆ ನೋಟ್ಸ್, ಹೋಂ ವರ್ಕ್ ಅಂತ ಬರೆಯುತ್ತಲೇ ಇರುತ್ತಾರೆ. ಹೀಗಾಗಿ ಕೇವಲ ಪಠ್ಯ ಪುಸ್ತಕಗಳಿಗಷ್ಟೇ ವಿದ್ಯಾರ್ಥಿಗಳು ಸೀಮಿತವಾಗಬಾರದು, ಪಠ್ಯೇತರ ಚಟುವಟಿಕೆಗಳಲ್ಲೂ ಅವರು ಕ್ರೀಯಾಶೀಲರಾಗುವಂತೆ ಮಾಡಬೇಕು. ಖಾಸಗಿ ಶಾಲೆಗಳ ಮಕ್ಕಳಂತೆ ಸರ್ಕಾರಿ ಶಾಲೆಯ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತರಾಗಬೇಕು ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
Advertisement
ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಂಜುನಾಥ್ ರ ಮಾರ್ಗದರ್ಶನದಲ್ಲಿ, ಅಧಿಕಾರಿಗಳು ಪ್ರಾಯೋಗಿಕ ಹಂತವಾಗಿ ಜುಲೈ ಹಾಗೂ ಆಗಸ್ಟ್ ಎರಡು ತಿಂಗಳಲ್ಲಿ ನಾಲ್ಕು ದಿನಗಳ ಬ್ಯಾಗ್ ಲೆಸ್ ಡೇ ಪ್ರಯೋಗ ನಡೆಸಲಾಗುತ್ತಿದೆ.
Advertisement