ನವದಹಲಿ: ಎಸ್‍ಬಿಐ ಎಟಿಎಂನಲ್ಲಿ ನಕಲಿ 2 ಸಾವಿರ ರೂ. ನೋಟ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
27 ವರ್ಷದ ಮೊಹಮ್ಮದ್ ಇಶಾ ಬಂಧಿತ ಆರೋಪಿ. ಈತ ಎಟಿಎಂ ಕ್ಯಾಶ್ ಲೋಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಗಮ್ ವಿಹಾರ್‍ನ ಎಸ್‍ಬಿಐ ಎಟಿಎಂನಲ್ಲಿ ನಕಲಿ ನೋಟು ಪತ್ತೆಯಾದ ದಿನ ಈತನೇ ಕ್ಯಾಶ್ ಕಸ್ಟೋಡಿಯನ್ ಆಗಿದ್ದ.
Advertisement
Advertisement
ಇತ 5 ಒರಿಜಿನಲ್ ನೋಟ್‍ಗಳನ್ನ ತೆಗೆದು ಅದರ ಬದಲು ನಕಲಿ ನೋಟ್‍ಗಳನ್ನ ಇಟ್ಟಿದ್ದಾನೆ. ಈ ನೋಟುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಇವನ್ನು ಮಕ್ಕಳು ಆಟವಾಡಲು ಬಳಸುತ್ತಾರೆ ಎಂದು ಡಿಸಿಪಿ ರೋಮಿಲ್ ಬಾನಿಯಾ ಹೇಳಿದ್ದಾರೆ.
Advertisement
ಮೊದಲಿಗೆ ಹಣವಿದ್ದ ಬಾಕ್ಸ್ ಹೊಂದಿದ್ದ ವಾಹನವನ್ನು ದಕ್ಷಿಣ ದೆಹಲಿಯ ಡಿಯೋಲಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಎಟಿಎಂಗೆ ಹಣ ತುಂಬಿಸಿದ ನಂತರ ಸಂಗಮ್ ವಿಹಾರ್‍ನತ್ತ ಬಂದಿದ್ದಾರೆ. ಇಶಾ ಡಿಯೋಲಿಯಲ್ಲಿಯೇ ನಕಲಿ ನೋಟ್ ಬದಲಾಯಿಸಿದ್ದಾನೆ. ಈ ಕೆಲಸ ಮಾಡಲು ಇವನ್ನೊಬ್ಬನಿಂದಲೇ ಸಾಧ್ಯ ಎಂದು ತನಿಖಾಧಿಕಾರೊಯೊಬ್ಬರು ಹೇಳಿದ್ದಾರೆ.
Advertisement
ಇಶಾ ಬದಲಾಯಿಸಿದ್ದಾನೆ ಎನ್ನಲಾದ ನೋಟ್‍ಗಳನ್ನು ಪೊಲೀಸರು ಇನ್ನೂ ವಶಪಡಿಸಿಕೊಂಡಿಲ್ಲ. ಈತನ ಬಳಿ ಈಗಿರುವ 2 ಸಾವಿರ ರೂ. ನೋಟ್‍ಗಳು ಎಟಿಎಂಗೆ ಹಾಕಬೇಕಿದ್ದ ಹಣದಿಂದ ಕದ್ದಿದ್ದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೆ ಘಟನೆ ನಡೆದು ತುಂಬಾ ಸಮಯವಾಗಿರುವುದರಿಂದ ಈಗಾಗಲೇ ಆತ ಹಣವನ್ನು ಖರ್ಚು ಮಾಡಿರಲೂಬಹುದು ಎಂದು ವಿವರಿಸಿದ್ದಾರೆ.
ಎಟಿಎಂನಲ್ಲಿ ಸಿಕ್ಕ ನಕಲಿ ನೋಟುಗಳು ದೆಹಲಿಯ ಮಾರುಕಟ್ಟೆಯಲ್ಲಿ 40 ರೂ. ಬೆಲೆಗೆ ಸುಲಭವಾಗಿ ಸಿಗುತ್ತವೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.