ಲಕ್ನೋ: ಟ್ರ್ಯಾಕ್ಟರ್ ಟ್ರಾಲಿ (Tractor Trolley) ಪಲ್ಟಿಯಾಗಿ 11 ಜನ ಮಕ್ಕಳು ಸೇರಿದಂತೆ 24 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ( Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.
Advertisement
ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಉನ್ನಾವೋದಿಂದ (Unnao) ಹಿಂತಿರುಗುತ್ತಿತ್ತು. ಈ ವೇಳೆ ಕಾನ್ಪುರ ಜಿಲ್ಲೆಯ ಘಟಂಪುರ (Ghatampur) ಪ್ರದೇಶದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮೋದಿ ವಿರುದ್ಧ ಹೋಗ್ತಾರಲ್ಲ ಇದು ಚೈಲ್ಡಿಶ್ ತನ, ರಾಹುಲ್ ಗಾಂಧಿ ಫನ್ನಿಬಾಯ್ : ರೇಣುಕಾಚಾರ್ಯ ವ್ಯಂಗ್ಯ
Advertisement
Advertisement
ಈ ಸಂಬಂಧ ಪ್ರಧಾನ ಮಂತ್ರಿ (PMO) ಕಾರ್ಯಾಲಯ ಟ್ವೀಟ್ ಮಾಡಿದ್ದು, ಕಾನ್ಪುರದಲ್ಲಿ ಸಂಭವಿಸಿದ ಟ್ರಾಕ್ಟರ್-ಟ್ರಾಲಿ ಅಪಘಾತದಿಂದ ಕಂಗಾಲಾಗಿದ್ದೇವೆ. ಘಟನೆಯಲ್ಲಿ ಮೃತಪಟ್ಟವರ ನೆನಪುಗಳು ನಮ್ಮ ಮತ್ತು ಅವರ ಆತ್ಮೀಯರೊಂದಿಗೆ ಸದಾ ಇರುತ್ತದೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಸ್ಥಳೀಯ ಪೊಲೀಸರು ಸಂತ್ರಸ್ತರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದಾರೆ. ಮೃತರ ಕುಟುಂಬಕ್ಕೆ ಪಿಎಂಎನ್‍ಆರ್‍ಎಫ್‍ನಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಮತ್ತು ಘಟನೆಯಲ್ಲಿ ಗಾಯಗೊಂಡವರಿಗೆ 50,000 ನೀಡಲಾಗುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಕೇರಳದ ಹಿರಿಯ ಸಿಪಿಐಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ