ಪಾಟ್ನಾ: ಮದುವೆಗೂ (Marriage) ಮುನ್ನ ಸಂಪ್ರದಾಯದ ಭಾಗವಾಗಿ ನಡೆಸುವ ಧಾರ್ಮಿಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರ ಮೇಲೇ ಟ್ರಕ್ ಏಕಾಏಕಿ ಹರಿದ ಪರಿಣಾಮ 15 ಜನರು ಸಾವನ್ನಪ್ಪಿರುವ ಘಟನೆ ಬಿಹಾರದ (Bihar) ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
Advertisement
ಮೃತರಲ್ಲಿ ಮಹಿಳೆಯರು, ಮಕ್ಕಳು ಕೂಡಾ ಸೇರಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು (Bihar Police) ಶೋಧ ಆರಂಭಿಸಿದ್ದಾರೆ. ಇದನ್ನೂ ಓದಿ: ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!
Advertisement
The accident in Vaishali, Bihar is saddening. Condolences to the bereaved families. May the injured recover soon. An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi
— PMO India (@PMOIndia) November 20, 2022
Advertisement
ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ವಾಹನ ನಿಯಂತ್ರಣ ಕಳೆದುಕೊಂಡಿದ್ದೇ ಕಾರಣ ಎಂದು ಶಂಕಿಸಲಾಗಿದೆ. ಬಿಹಾರ ಸಚಿವ ತೇಜಸ್ವಿ ಯಾದವ್ (Tejashwi Yadav) ಕೂಡ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾ ತಲೆ ಶೋಧಕ್ಕಾಗಿ ಕೆರೆಯ ನೀರನ್ನೇ ಖಾಲಿ ಮಾಡಿಸಲು ಮುಂದಾದ ಪೊಲೀಸರು
Advertisement
ಗಾಯಾಳುಗಳನ್ನು ಇಲ್ಲಿನ ಹಾಜಿಪುರದ ಸಾದರ್ ಆಸ್ಪತ್ರೆಗೆ (Sadar Hospital) ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಪಾಟ್ನಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
आज रात्रि हाजीपुर में एक सड़क दुर्घटना में कई लोगों की मृत्यु की हृदयविदारक खबर से मर्माहत हूँ। शोक संतप्त परिजनों के प्रति अपनी गहरी संवेदना व्यक्त तथा घायलों के शीघ्र स्वस्थ होने कामना करता हूँ। ईश्वर दिवंगत आत्माओं की शांति व उनके परिजनों को यह दुःख सहने की शक्ति प्रदान करें।
— Tejashwi Yadav (@yadavtejashwi) November 20, 2022
ವೈಶಾಲಿ ಜಿಲ್ಲೆಯ ಎಸ್ಪಿ ಮನೀಶ್ ಕುಮಾರ್ ಮಾತನಾಡಿ, ಮದುವೆ ಸಂಪ್ರದಾಯವಾಗಿ ಧಾರ್ಮಿಕ ಮೆರವಣಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಇಲ್ಲಿನ ಸುಲ್ತಾನ್ಪುರ ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಕೆಲವೇ ದಿನಗಳಲ್ಲಿ ಮದುವೆ ನಿಗದಿಯಾಗಿತ್ತು. ಟ್ರಕ್ನ ಚಾಲಕ ವೇಗವಾಗಿ ಚಲಿಸುತ್ತಿದ್ದನು. ಮಹನಾರ್-ಹಾಜಿಪುರ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.