– ರಾಹುಲ್ ಕೂಟದ ವಿರುದ್ಧ ಆಜಾದ್ ಕೆಂಡ
– ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಆಗಬೇಕಿತ್ತು
– ಸೋನಿಯಾ ದೀರ್ಘ ಪತ್ರ ಬರೆದು ರಾಜೀನಾಮೆ
– ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಆಗಬೇಕಿತ್ತು
– ಸೋನಿಯಾ ದೀರ್ಘ ಪತ್ರ ಬರೆದು ರಾಜೀನಾಮೆ
ನವದೆಹಲಿ: ರಾಹುಲ್ ಗಾಂಧಿ ಚೈಲ್ಡೀಶ್, ಅಪ್ರಬುದ್ಧ ನಾಯಕ. ಅವರ ವರ್ತನೆಯಿಂದಾಗಿ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಆಗಬೇಕಿತ್ತು. ಪಕ್ಷದಲ್ಲಿನ ದೌರ್ಬಲ್ಯಗಳಿಗೆ ಕಾರಣ ಮತ್ತು ಅದಕ್ಕೆ ಪರಿಹಾರ ಎತ್ತಿ ತೋರಿಸಿದ್ದೆ ದೊಡ್ಡ ಅಪರಾಧ. ಪಕ್ಷದ ಒಳಿತಿಗೆ ಸಲಹೆ ಕೊಟ್ಟವರನ್ನು ಅವಮಾನ ಮಾಡಿ ನಿಂದಿಸಲಾಯಿತು. ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್ ಅವನತಿ. ಇದು ರಾಹುಲ್ ವಿರುದ್ಧ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಕಿಡಿ ಕಾರಿದ ಪರಿ.
ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರಿದ್ದು ಯಾಕೆ? ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವಧಿಯಲ್ಲಿ ಕಾಂಗ್ರೆಸ್ ಹೇಗಿತ್ತು? ಎರಡು ಯುಪಿಎ ಸರ್ಕಾರದ ಅವಧಿಯಲ್ಲಿ ಹೇಗಿತ್ತು? 2012ರ ನಂತರ ಏನಾಯ್ತು? ರಾಹುಲ್ ಗಾಂಧಿ ನಿರ್ಧಾರಗಳು ಹೇಗೆ ಪಕ್ಷವನ್ನು ಅವನತಿಯತ್ತ ತೆಗೆದುಕೊಂಡು ಹೋಯಿತು ಎಂಬುದನ್ನು ವಿವರವಾಗಿ ಬರೆದಿದ್ದಾರೆ.
Advertisement
ಸೋನಿಯಾಗೆ ಬರೆದ ಪತ್ರದಲ್ಲಿ ರಾಹುಲ್ ವಿರುದ್ಧ ಮಾಡಿದ ಆರೋಪ ಏನು?
ರಾಹುಲ್ ಗಾಂಧಿ ಸುಗ್ರೀವಾಜ್ಞೆಯನ್ನು ಎಸೆದ ಬಳಿಕ ಕಾಂಗ್ರೆಸ್ ಪತನ ಆರಂಭವಾಯಿತು. ಕ್ಯಾಬಿನೆಟ್‌ನಲ್ಲಿ ಚರ್ಚಿಸಿದ ಬಳಿಕ ರಾಷ್ಟ್ರಪತಿಯರಿಂದ ಹೊರಡಿಸಲಾದ ಸುಗ್ರೀವಾಜ್ಞೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇನೆ ಎಂದು ಹೇಳಿದ್ದು ಬಾಲಿಶ ವರ್ತನೆ. ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದು ಹಾಕುತ್ತೇನೆ ಎಂದಿದ್ದು ರಾಹುಲ್ ಅಪ್ರಬುದ್ಧತೆಗೆ ಒಂದು ಜ್ವಲಂತ ಉದಾಹರಣೆ. ಮಾಧ್ಯಮಗಳಲ್ಲಿ ಹೀರೋ ಆಗಲು ಹೋದ ರಾಹುಲ್ ಗಾಂಧಿ ಅವರೇ 2014ರ ಕಾಂಗ್ರೆಸ್ ಸೋಲಿಗೆ ಕಾರಣ.
Advertisement
Advertisement
ರಾಹುಲ್ ಅಧ್ಯಕ್ಷರಾದ ಬಳಿಕ ತನ್ನನ್ನು ಯಾರು ಹೊಗಳುತ್ತಾರೋ ಅವರ ಮಾತಿಗೆ ಬೆಲೆ ಕೊಡಲು ಆರಂಭಿಸಿದರು. ಹಿರಿಯ ನಾಯಕರ ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲ. ಪಕ್ಷ ಉಳಿಸಲು ಪ್ರಶ್ನೆ ಮಾಡಿದ ಹಿರಿಯ ನಾಯಕರನ್ನು ಮೂಲೆಗೂಂಪು ಮಾಡಲಾಯಿತು.
Advertisement
2013 ರ ಜನವರಿಯಲ್ಲಿ ಜೈಪುರ ಕಾರ್ಯಕಾರಿಣಿಯಲ್ಲಿ 2014ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ವಿವರವಾದ ಕ್ರಿಯಾ ಯೋಜನೆಯನ್ನು ಸಮಿತಿಯ ಇತರ ಸದಸ್ಯರ ಸಹಾಯದಿಂದ ನಾನು ಪ್ರಸ್ತಾಪಿಸಿದ್ದೆ. ಆ ಕ್ರಿಯಾ ಯೋಜನೆಗೆ ಸಿಡಬ್ಲ್ಯೂಸಿ ಅನುಮೋದನೆ ನೀಡಿದೆ. ಈ ಶಿಫಾರಸುಗಳನ್ನು 2014ರ ಲೋಕಸಭೆ ಚುನಾವಣೆಗೂ ಮುನ್ನ ಕಾಲಮಿತಿಯಲ್ಲಿ ಜಾರಿಗೊಳಿಸಬೇಕಿತ್ತು. ದುರದೃಷ್ಟವಶಾತ್, ಈ ಶಿಫಾರಸುಗಳು ಕಳೆದ 9 ವರ್ಷಗಳಿಂದ ಎಐಸಿಸಿಯ ಸ್ಟೋರ್ ರೂಂನಲ್ಲಿ ಬಿದ್ದಿವೆ. 2013 ರಿಂದ ಈ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಲು ನಿಮಗೆ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ವೈಯಕ್ತಿಕವಾಗಿ ಪದೇ ಪದೇ ನೆನಪು ಮಾಡಿದರು ಅದನ್ನು ಗಂಭೀರವಾಗಿ ಪರಿಶೀಲಿಸುವ ಪ್ರಯತ್ನ ನಡೆದಿಲ್ಲ. ಇದನ್ನೂ ಓದಿ: ಸಿಎಂ ಯೋಗಿ ಆದಿತ್ಯನಾಥ್‌ಗೆ ಬಿಗ್ ರಿಲೀಫ್
2014 ರಿಂದ ನಿಮ್ಮ ಉಸ್ತುವಾರಿಯಲ್ಲಿ ಮತ್ತು ನಂತರ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಎರಡು ಲೋಕಸಭಾ ಚುನಾವಣೆಗಳಲ್ಲಿ ಅವಮಾನಕರ ರೀತಿಯಲ್ಲಿ ಸೋತಿದೆ. 2014 – 2022 ರ ನಡುವೆ ನಡೆದ 49 ವಿಧಾನಸಭಾ ಚುನಾವಣೆಗಳಲ್ಲಿ 39ರಲ್ಲಿ ಸೋತಿದೆ. ಪಕ್ಷವು ಕೇವಲ ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಗೆದ್ದಿದೆ ಮತ್ತು ಆರು ಬಾರಿ ಸಮ್ಮಿಶ್ರ ಸರ್ಕಾರ ಬಂದಿದೆ. ದುರದೃಷ್ಟವಶಾತ್ ಇಂದು ಕಾಂಗ್ರೆಸ್ ಕೇವಲ ಎರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ.
2019ರ ಚುನಾವಣೆಯಿಂದ ಪಕ್ಷದ ಪರಿಸ್ಥಿತಿ ವಿಪರೀತ ಹದಗೆಟ್ಟಿದೆ. ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಕ್ಷಕ್ಕೆ ಪ್ರಾಣ ಕೊಟ್ಟ ಎಲ್ಲಾ ಹಿರಿಯ ಕಾರ್ಯಕರ್ತರನ್ನು ರಾಹುಲ್ ಗಾಂಧಿ ಅವಮಾನಿಸಿದ್ದಾರೆ. ಕಾಂಗ್ರೆಸ್‌ನಲ್ಲಿʼರಿಮೋಟ್ ಕಂಟ್ರೋಲ್ ಮಾಡೆಲ್ʼ ಇದೆ. ನೀವು ಕೇವಲ ನಾಮಮಾತ್ರದ ವ್ಯಕ್ತಿಯಾಗಿದ್ದು ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಹುಲ್ ಗಾಂಧಿಯವರು ತೆಗೆದುಕೊಳ್ಳುತ್ತಿದ್ದಾರೆ ಅಥವಾ ಅವರ ಭದ್ರತಾ ಸಿಬ್ಬಂದಿ ಮತ್ತು ಪಿಎಗಳು ತೆಗೆದುಕೊಳ್ಳುತ್ತಿದ್ದಾರೆ.
2020ರ ಆಗಸ್ಟ್‌ನಲ್ಲಿ ನಾನು ಮತ್ತು ಮಾಜಿ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಇತರ 22 ಹಿರಿಯ ನಾಯಕರು ಪಕ್ಷದ ಹೀನಾಯ ಸ್ಥಿತಿಯ ಬಗ್ಗೆ ನಿಮಗೆ ಪತ್ರ ಬರೆದಾಗ ನಮ್ಮ ವಿರುದ್ಧವೇ ʼಕೂಟʼ ತಿರುಗಿ ಬಿತ್ತು. ನಮ್ಮ ಮೇಲೆ ದಾಳಿ ನಡೆಸಿ ನಿಂದಿಸಿ ಅವಮಾನ ಮಾಡಲಾಯಿತು.
ಎಐಸಿಸಿ ನಡೆಸುತ್ತಿರುವ ಕೂಟದ ನಿರ್ದೇಶನದ ಮೇರೆಗೆ ನನ್ನ ಅಣಕು ಶವಯಾತ್ರೆಯನ್ನು ಜಮ್ಮುವಿನಲ್ಲಿ ನಡೆಸಲಾಯಿತು. ಈ ಅಶಿಸ್ತು ಎಸಗಿದವರನ್ನು ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಹುಲ್ ಗಾಂಧಿಯವರು ವೈಯಕ್ತಿಕವಾಗಿ ಸನ್ಮಾನಿಸಿದರು. ಕೂಟ ಎಸಗಿದ ತಪ್ಪುಗಳನ್ನು, ನಿಮ್ಮನ್ನು, ನಿಮ್ಮ ಸಂಬಂಧಿಕರು ಮಾಜಿ ಸಚಿವ, ಸಹೋದ್ಯೋಗಿ ಕಪಿಲ್ ಸಿಬಲ್ ಅವರು ನ್ಯಾಯಾಲಯಗಳಲ್ಲಿ ಬಲವಾಗಿ ಸಮರ್ಥಿಸುತ್ತಿದ್ದರು.
ಪಕ್ಷದ ಮೇಲಿನ ಕಳಕಳಿಯಿಂದ 23 ಹಿರಿಯ ನಾಯಕರು ಪತ್ರ ಬರೆದಿದ್ದರು. ಪಕ್ಷದಲ್ಲಿನ ದೌರ್ಬಲ್ಯಗಳಿಗೆ ಕಾರಣ ಮತ್ತು ಅದಕ್ಕೆ ಪರಿಹಾರ ಎರಡನ್ನೂ ಎತ್ತಿ ತೋರಿಸಿದ್ದೆ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಯಿತು. ರಾಷ್ಟ್ರಮಟ್ಟದಲ್ಲಿ ನಮಗೆ ಲಭ್ಯವಿರುವ ರಾಜಕೀಯ ಜಾಗವನ್ನು ಬಿಜೆಪಿಗೆ ಮತ್ತು ರಾಜ್ಯ ಮಟ್ಟದ ಜಾಗವನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದೇವೆ. ಕಳೆದ 8 ವರ್ಷಗಳಲ್ಲಿ ಗಂಭೀರವಲ್ಲದ ವ್ಯಕ್ತಿಗೆ ಪಕ್ಷದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದರಿಂದ ಇದೆಲ್ಲ ಸಂಭವಿಸಿದೆ.
ವಾಸ್ತವವಾಗಿ, ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ನಾಯಕತ್ವವು ದೇಶಾದ್ಯಂತ ಕಾಂಗ್ರೆಸ್ ಜೋಡೋವನ್ನು ಕೈಗೊಳ್ಳಬೇಕಾಗಿತ್ತು. ದುರದೃಷ್ಟವಶಾತ್ ಕಾಂಗ್ರೆಸ್ ಪಕ್ಷದಲ್ಲಿನ ಪರಿಸ್ಥಿತಿಯು ಹಿಂತಿರುಗದ ಸ್ಥಿತಿಗೆ ತಲುಪಿದೆ. ಎಐಸಿಸಿ ಈಗ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ. ಈಗ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲು ‘ಪ್ರತಿನಿಧಿಗಳು’ ಮುಂದಾಗಿದ್ದಾರೆ. ಆದರೆ ಈ ಪ್ರಯೋಗವು ವಿಫಲವಾಗುತ್ತದೆ. ಯಾಕೆಂದರೆ ಆಯ್ಕೆ ಆದವರು ದಾರದ ಬೊಂಬೆಯಲ್ಲದೇ ಬೇರೇನೂ ಆಗಿರುವುದಿಲ್ಲ. ಈ ಎಲ್ಲ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗಿನ ನನ್ನ ಅರ್ಧ ಶತಮಾನದ ಹಳೆಯ ಒಡನಾಟವನ್ನು ಕಡಿದುಕೊಳ್ಳಲು ಮತ್ತು ಈ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ನನ್ನ ಎಲ್ಲಾ ಸ್ಥಾನಗಳಿಗೆ ರಾಜೀನಾಮೆಯನ್ನು ಬಹಳ ವಿಷಾದದಿಂದ ನೀಡುತ್ತಿದ್ದೇನೆ.
ದಿವಂಗತ ಇಂದಿರಾ ಗಾಂಧಿ, ದಿವಂಗತ ಸಂಜಯ್ ಗಾಂಧಿಯವರಿಂದ ನಿಮ್ಮ ದಿವಂಗತ ಪತಿ ಸೇರಿದಂತೆ ನಿಮ್ಮ ಕುಟುಂಬದೊಂದಿಗೆ ನಾನು ಅತ್ಯಂತ ನಿಕಟ ವೈಯಕ್ತಿಕ ಸಂಬಂಧವನ್ನು ಹೊಂದಿದ್ದೇನೆ ಎಂದು ನಿಮಗೆ ತಿಳಿದಿದೆ. ಅದು ಯಾವಾಗಲೂ ಮುಂದುವರಿಯುತ್ತದೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]