Advertisements

ವಿಡಿಯೋ: ರಿಕ್ಷಾದಿಂದ ಕೆಳಗೆ ಬಿದ್ದು, ಟ್ರಕ್ ಹರಿದರೂ ಬದುಕುಳಿದ ಬಾಲಕ

ಬೀಜಿಂಗ್: ಆಟೋ ರಿಕ್ಷಾದಿಂದ ಕೆಳಗೆ ಬಿದ್ದ ಬಾಲಕನ ಮೇಲೆ ಟ್ರಕ್ ಹರಿದರೂ ಆತ ಬದುಕುಳಿದಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

Advertisements

ಇಲ್ಲಿನ ಜಿಯಾಂಗ್ಸು ಪ್ರಾಂತ್ಯದ ಚಾಂಗ್ಸು ನಗರದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾನೆ. ಘಟನೆಯ ದೈಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisements

ಆಟೋ ರಿಕ್ಷಾ ಟ್ರಾಫಿಕ್ ಸಿಗ್ನಲ್‍ನಲ್ಲಿ ನಿಂತಿದ್ದು, ಹಿಂದೆಯೇ ಟ್ರಕ್‍ವೊಂದು ಬಂದು ನಿಂತಿತ್ತು. ನಂತರ ಹಸಿರು ಲೈಟ್ ಬಿದ್ದ ತಕ್ಷಣ ಆಟೋ ರಿಕ್ಷಾ ಚಲಿಸಲು ಶುರುವಾಗಿದ್ದು, ಒಳಗೆ ಕುಳಿತಿದ್ದ 5 ವರ್ಷದ ಬಾಲಕ ಕೆಳಗೆ ಬಿದ್ದಿದ್ದಾನೆ. ರಿಕ್ಷಾ ಮುಂದೆ ಹೋಗ್ತಿದ್ದಂತೆ ಟ್ರಕ್ ಕೂಡ ಚಲಿಸಲು ಆರಂಭಿಸಿದ್ದು ಬಾಲಕನ ಮೇಲೆಯೇ ಹಾದು ಹೋಗಿದೆ.

Advertisements

ಬಾಲಕ ಕೆಳಗೆ ಬಿದ್ದಿದ್ದನ್ನು ಅರಿತು, ಆಟೋದಲ್ಲಿದ್ದ ಇತರರು ಗಾಬರಿಯಿಂದ ಹೋಗಿ ನೋಡಿದ್ದಾರೆ. ಆದ್ರೆ ಎಲ್ಲರಿಗೂ ಆಶ್ಚರ್ಯವಾಗೋ ರೀತಿಯಲ್ಲಿ ಬಾಲಕ ರಸ್ತೆಯಿಂದ ಎದ್ದು ನಿಂತಿದ್ದ. ಬಾಲಕನ ಕೈಗಳ ಮೇಲೆ ಗಾಯವಾಗಿದ್ದು ಬಿಟ್ಟರೆ ಹೆಚ್ಚಿನ ಅಪಾಯವಾಗಿಲ್ಲ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

https://www.youtube.com/watch?time_continue=28&v=GlxJUAU5RBk

Advertisements
Exit mobile version