ಬೆಂಗಳೂರು: ಮಕ್ಕಳ ಕಳ್ಳಸಾಗಾಣಿಕೆ (Child Trafficking) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಭರ್ಜರಿ ಕಾರ್ಯಾಚರಣೆ ನಡೆಸಿ ಹಸುಗೂಸು ಮಾರಾಟ ದಂಧೆಯನ್ನು ಭೇದಿಸಿದ್ದಾರೆ. ಇನ್ನೂ ಈ ಗ್ಯಾಂಗ್‌ನಲ್ಲಿದ್ದ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿ ನೀಡಲಾಗಿದೆ.
ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳಾದ ಶರಣ್ಯ, ರಾಧ, ಸುಹಾಸಿನಿ, ಮಹಾಲಕ್ಷ್ಮಿ, ಗೋಮತಿ, ಹೇಮಲತಾ, ಕಣ್ಣನ್ ರಾಮಸ್ವಾಮಿ ಎಂಬವರನ್ನು ಬಂಧಿಸಲಾಗಿದೆ. ಈ 7 ಆರೋಪಿಗಳ ಪೈಕಿ ಮಹಾಲಕ್ಷ್ಮಿ ಮತ್ತು ರಾಧ ಪ್ರಮುಖ ಆರೋಪಿಗಳಾಗಿದ್ದಾರೆ. ಮಹಾಲಕ್ಷ್ಮಿ ಮಗು ಯಾರಿಗೆ ಬೇಕು ಎನ್ನುವುದನ್ನು ಹುಡುಕಿ ಡೀಲ್ ಮಾಡಿದರೇ ರಾಧ ಎಲ್ಲಿ ಮಗು ಇದೆ ಎಂಬುದನ್ನು ಹುಡುಕಿ ಅಲ್ಲಿಂದ ಡೀಲ್ ಮಾಡಿ ಮಹಾಲಕ್ಷ್ಮಿ ಹೇಳಿದ ಕಡೆಗೆ ಶರಣ್ಯ ಮತ್ತು ಇತರರ ಮೂಲಕ ಕಳುಹಿಸುತ್ತಿದ್ದಳು. ಇದನ್ನೂ ಓದಿ: ಮೂರು ತಿಂಗಳಲ್ಲಿ 242 ಭ್ರೂಣ ಹತ್ಯೆ: ಪೊಲೀಸ್ ಆಯುಕ್ತ
Advertisement
Advertisement
ಶರಣ್ಯ: ಈಕೆ ರಾಧ ಮಗು ಸೇಲ್ ಮಾಡುವಾಗ ಜೊತೆಗೆ ಹೋಗುತ್ತಿದ್ದಳು ಮತ್ತು ಮಗುವನ್ನು ಸೇಲ್ ಮಾಡಿದ ನಂತರ ಹಣವನ್ನು ಪಡೆಯುವುದು ಈಕೆಯ ಕೆಲಸವಾಗಿತ್ತು.
Advertisement
ಸುಹಾಸಿನಿ: ಈಕೆ ಸರೋಗೆಸಿ ಏಜೆಂಟ್ ಮಕ್ಕಳು ಯಾರಿಗೆ ಬೇಕು ಮತ್ತು ಮಕ್ಕಳನ್ನು ಯಾರು ಕೊಡುತ್ತಾರೆ ಎನ್ನುವುದನ್ನು ಫೋಟೊಗಳ ಸಹಿತ ಕೆಲಸ ಮಾಡುತ್ತಿದ್ದಳು.
Advertisement
ರಾಧ: ಹೇಮಲತ ಮತ್ತು ಶರಣ್ಯನನ್ನು ಕಳುಹಿಸಿ ಹಣ ಪಡೆಯುವುದು ಮತ್ತೆ ಮಗುವನ್ನು ಕೊಟ್ಟುಬರುವ ಕೆಲಸ ಈಕೆ ಮಾಡಿಸುತ್ತಿದ್ದಳು. ಈಕೆ ತಮಿಳುನಾಡಿನ ಆಸ್ಪತ್ರೆಯಲ್ಲಿ ಬಾಡಿಗೆ ತಾಯ್ತನ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆ ಮಗುವನ್ನು ಮಾಡಿಕೊಂಡು ಸಾಕಲು ಆಗಲ್ಲಾ ಎನ್ನುವವರನ್ನು ಟಾರ್ಗೆಟ್ ಮಾಡಿ ಸಂಪರ್ಕ ಮಾಡುತ್ತಿದ್ದಳು.
ಕಣ್ಣನ್ ರಾಮಸ್ವಾಮಿ: ಈತ ಸಹ ಒರ್ವ ಏಜೆಂಟ್ ಆಗಿದ್ದು, ಮಹಾಲಕ್ಷ್ಮಿ ಮಗು ಬೇಕು ಎಂದು ರಾಧಗೆ ಹೇಳಿದಾಗ ರಾಧ ಕಣ್ಣನ್‌ಗೆ ಮಾಹಿತಿ ನೀಡುತ್ತಾಳೆ. ಆಗ ಕಣ್ಣನ್ ಈ ವಿಚಾರವನ್ನು ಗೋಮತಿಗೆ ಹೇಳುತ್ತಿದ್ದ. ಗೋಮತಿ ಮಗುವಿನ ತಾಯಿಗೆ ಸಂಪರ್ಕ ಮಾಡುತ್ತಿದ್ದಳು.
ಮಹಾಲಕ್ಷ್ಮಿ: ಈಕೆ ಕರ್ನಾಟಕದಲ್ಲಿ ಮಗು ಯಾರಿಗೆ ಬೇಕು ಎಂದು ಮಾಹಿತಿ ಪಡೆದು ನಂತರ ಆ ಮಾಹಿತಿಯನ್ನು ತಮಿಳುನಾಡಿನ (Tamil Nadu) ಗ್ಯಾಂಗ್‌ಗೆ ಹೇಳುತ್ತಿದ್ದಳು. ಆಗ ತಮಿಳುನಾಡಿನ ಗ್ಯಾಂಗ್ ಕೆಲಸ ಶುರು ಮಾಡುತ್ತಿತ್ತು.
ಗೋಮತಿ: ಈಕೆ ತಮಿಳುನಾಡಿನಿಂದ ಮಗು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಬರುತ್ತಿದ್ದಳು.
ಹೇಮಲತಾ: ರಾಧ ಹೇಳಿದಂತೆ ಮಗುವನ್ನು ತಂದು ಕೊಡುವ ಕೆಲಸ ಈಕೆಯದಾಗಿತ್ತು. ರಾಧ ಹೇಳುತ್ತಿದ್ದ ಪ್ರತಿಯೊಂದು ಕೆಲಸವನ್ನು ಈಕೆ ಮಾಡುತ್ತಿದ್ದಳು.
ಇದಾದ ಬಳಿಕ ಆರೋಪಿಗಳು ಗರ್ಭಿಣಿಯರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಮಹಿಳೆಯರನ್ನು ಮನವೊಲಿಸಿ ಕರೆದುಕೊಂಡು ಹೋಗಿ ಅವರಿಗೆ ಇರಲು ಬೇಕಾದ ವ್ಯವಸ್ಥೆ ಮಾಡಿಕೊಡುತ್ತಾರೆ. ಹೀಗೆ ಮಗು ಹುಟ್ಟುವವರೆಗೆ ಕಾದು ಹೆರಿಗೆ ಮಾಡಿಸುತ್ತಾರೆ. ನಂತರ ಮಗುವಿನ ಫೋಟೋವನ್ನು ಎಲ್ಲರಿಗೂ ಶೇರ್ ಮಾಡುವ ಮೂಲಕ ಯಾರು ಮಕ್ಕಳು ಇಲ್ಲ ಎಂದು ಹುಡುಕುತ್ತಾರೋ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಬಳಿಕ ಅವರಿಗೆ ಮಗುವಿನ ಫೋಟೋ ಕಳುಹಿಸಿ ಡೀಲ್ ಮಾಡುತ್ತಾರೆ. ಅಲ್ಲದೇ ಮಗುವಿಗೆ ಬೇಕಾದ ದಾಖಲಾತಿ ಸೃಷ್ಟಿ ಮಾಡುತ್ತಾರೆ. ಮಕ್ಕಳು ಹೇಗಿದ್ದಾರೆ? ಯಾವ ಬಣ್ಣ? ಲಿಂಗ ಯಾವುದು ಎಂಬ ಆಧಾರದ ಮೇಲೆ ಹಣವನ್ನು ನಿಗದಿ ಮಾಡಲಾಗುತ್ತದೆ. ಗಂಡು ಮಕ್ಕಳಾದರೆ 5ರಿಂದ 10 ಲಕ್ಷ ರೂ. ವರೆಗೆ ಮಾರಾಟ ಮಾಡುತ್ತಾರೆ. ಹೆಣ್ಣುಮಗುವಾದರೆ 4ರಿಂದ 5 ಲಕ್ಷದವರೆಗೂ ಮಾರಾಟ ಮಾಡಲಾಗುತ್ತದೆ. ಮಗುವನ್ನು ಹೆತ್ತುಕೊಟ್ಟ ತಾಯಂದಿರಿಗೆ ಒಂದೂವರೆಯಿಂದ 2 ಲಕ್ಷ ರೂ. ಹಣ ನೀಡಿ ಕಳುಹಿಸುತ್ತಾರೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು
ಇದಕ್ಕೂ ಮೊದಲು ಆರೋಪಿಗಳು ಡೋನರ್‌ಗಳನ್ನು ಕರೆದುಕೊಂಡು ಹೋಗಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. 2021ರಲ್ಲಿ ಕಾಯ್ದೆ ಕಠಿಣ ಆಗಿತ್ತು. ಸೆರೋಗೆಸಿ ಕಾಯ್ದೆ ಕಠಿಣ ಆದ ಬಳಿಕ ಇವರೆಲ್ಲರಿಗೂ ಏಜೆಂಟ್ ಕೆಲಸ ಮಾಡುವುದು ಕಷ್ಟವಾಗುತ್ತದೆ. ನಂತರ ಐವಿಎಫ್ ಆಸ್ಪತ್ರೆಗೆ ಡೋನರ್‌ಗಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ. ಒಂದು ಡೋನರ್‌ಗೆ 25,000 ಕಮಿಷನ್ ಪಡೆಯುತ್ತಿರುತ್ತಾರೆ. ಡೋನರ್ ಮತ್ತು ಎಗ್ಸ್ ಪಡೆಯುವವರು ಭೇಟಿಯಾಗಬೇಕು ಎಂದರೆ ಅದನ್ನು ಮಾಡಿಸುತ್ತಿರಲಿಲ್ಲಾ. ಆರೋಪಿಗಳು ತಾವು ಕುಟುಂಬ ಎಂದು ಸಹಿ ಮಾಡುತ್ತಿದ್ದರು. 25-35 ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆ ಮಹಿಳೆಯರು ಸಿಕ್ಕಿಲ್ಲಾ ಎಂದಾಗ ಆಧಾರ್ ಕಾರ್ಡ್ ನಕಲಿ ಮಾಡಿ ಕೆಲಸ ಮಾಡಲಾಗುತ್ತಿತ್ತು. ತಮಿಳುನಾಡಿನ ಆಸ್ಪತ್ರೆ ಕೇಸ್ ಆದ ಬಳಿಕ ಈ ದಂಧೆಯೂ ಕಷ್ಟ ಆಯಿತು. ನಂತರ ಗರ್ಭಿಣಿರು ಗರ್ಭಪಾತ ಮಾಡಿಸಲು ಬರುತ್ತಿದ್ದವರನ್ನು ಟಾರ್ಗೆಟ್ ಮಾಡಿದ್ದಾರೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ
ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನವೆಂಬರ್ 26ರಂದು ಆರ್‌ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅನುಮಾನದಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು. 20 ದಿನದ ನವಜಾತ ಶಿಶುವನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸಿದ್ದರು. ಈ ಗ್ಯಾಂಗ್‌ನಲ್ಲಿ 7 ಜನ ಆರೋಪಿಗಳಿದ್ದಾರೆ. ಇವರು ಮಹಿಳೆಯರನ್ನು ಪುಸಲಾಯಿಸಿ ಮಗುವನ್ನು ಹೆತ್ತುಕೊಡಲು ಒಪ್ಪಿಸಿದ್ದರು. ಹಣಕ್ಕಾಗಿ ಬಾಡಿಗೆ ತಾಯಿಯನ್ನು ಮಾಡುತ್ತಿದ್ದರು. ಇದುವರೆಗೆ ಈ ಗ್ಯಾಂಗ್ 10 ಮಕ್ಕಳನ್ನು ಮಾರಾಟ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್
8ರಿಂದ 10 ಲಕ್ಷ ರೂ.ಗೆ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು. ಅನಧಿಕೃತವಾಗಿ ದಾಖಲಾತಿಗಳನ್ನು ಮಾಡಿಕೊಡಲಾಗುತಿತ್ತು. ತಮಿಳುನಾಡಿನ ಪ್ರತಿಷ್ಠಿತ ವೈದ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ತಮಿಳುನಾಡಿನ 4 ಆಸ್ಪತ್ರೆಗಳು ಇದರಲ್ಲಿ ಭಾಗಿಯಾಗಿದೆ. ಈಗಾಗಲೇ 3 ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, 1 ಆಸ್ಪತ್ರೆಯಲ್ಲಿ ಇನ್ನೂ ಈ ಅವ್ಯವಹಾರ ನಡೆಯುತ್ತಿದೆ. ಅಲ್ಲಿನ ಬಡ ಹೆಣ್ಣುಮಕ್ಕಳಿಗೆ ಪುಸಲಾಯಿಸಿ ಈ ರೀತಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಡಾಕ್ಟರ್‌ಗಳ ಬಂಧನ ಆಗಬೇಕು ಎಂದರು. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ