ಮುಂಬೈ: ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಜೀವ ರಕ್ಷಿಸಿದ ಯೋಧರೊಬ್ಬರಿಗೆ ಬಾಲಕ ಸೆಲ್ಯೂಟ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಪ್ರವಾಹ ಬಂದಿದ್ದು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಜೊತೆ ಭಾರತೀಯ ಸೇನೆ ಕೂಡ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ ಮಾಡಿದ್ದಾರೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಗೌನ್‍ಬಾಗ್‍ನಲ್ಲಿ ಸೆರೆ ಹಿಡಿಯಲಾಗಿದೆ.
Advertisement
#WATCH A child salutes an Army personnel and tells him "aap bahut accha kaam karte ho", during rescue operations in flood-hit Gaonbagh. #Maharashtra (Source- Defence PRO) pic.twitter.com/ym1RX7TKjA
— ANI (@ANI) August 11, 2019
Advertisement
ವಿಡಿಯೋದಲ್ಲಿ ಬಾಲಕ ವೈಯಕ್ತಿಕವಾಗಿ ಯೋಧರೊಬ್ಬರನ್ನು ಭೇಟಿ ಮಾಡಿ ಶೇಕ್ ಹ್ಯಾಂಡ್ ನೀಡಿದ್ದಾನೆ. ಅಲ್ಲದೆ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದಾನೆ. ಇದಕ್ಕೆ ಯೋಧ ಬಾಲಕನಿಗೆ ಧನ್ಯವಾದ ತಿಳಿಸಿದ್ದಾರೆ. ಯೋಧ ಧನ್ಯವಾದ ತಿಳಿಸುತ್ತಿದ್ದಂತೆ ಬಾಲಕ ಸೆಲ್ಯೂಟ್ ಮಾಡಿದ್ದಾನೆ.
Advertisement
ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು, ಇದುವರೆಗೂ 2 ಲಕ್ಷಕ್ಕೂ ವ್ಯೂ ಪಡೆದಿದೆ. ಅಲ್ಲದೆ 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 7 ಸಾವಿರಕ್ಕೂ ಹೆಚ್ಚು ಜನರು ರೀ-ಟ್ವೀಟ್ ಮಾಡಿದ್ದಾರೆ.
Advertisement
This is too emotional ???? for me to handle…!
A woman thanking the Indian Army who saved her life and her family…!
When she’s lost the hope on life due to #Kolhapurfloods our Army did the miracle job…! #IndianArmy is our pride..! pic.twitter.com/YxIhIJxHjD
— KY (@kyyadhu) August 9, 2019
ಈ ಹಿಂದೆ ಪ್ರವಾಹಕ್ಕೆ ತುತ್ತಾಗಿರುವ ಕೋಲ್ಹಾಪುರ ಪ್ರದೇಶದಲ್ಲಿ ಮಹಿಳೆ ಬೋಟ್‍ನಲ್ಲಿ ತೆರಳುತ್ತಿದ್ದಾಗ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ನಮಸ್ಕರಿಸುವ ದೃಶ್ಯ ವೈರಲ್ ಆಗಿತ್ತು. ಸಿಬ್ಬಂದಿ ಕಾಲಿಗೆ ನಮಸ್ಕರಿಸೋದು ತಪ್ಪು ಎಂದು ಹೇಳಿದರೂ, ನೀವು ನನ್ನ ಜೀವವನ್ನು ರಕ್ಷಿಸಿದ್ದೀರಿ ಎಂದು ಕೈ ಮುಗಿದು ಮಹಿಳೆ ಧನ್ಯವಾದ ಸಲ್ಲಿಸಿದ್ದರು.