ಬೀಜಿಂಗ್: ರಸ್ತೆ ಅಪಘಾತಗಳಾದಾಗ ಬಹುತೇಕ ಸಂದರ್ಭಗಳಲ್ಲಿ ಅಪಘಾತ ಮಾಡಿದವರು ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನೂ ಕೆಲವು ಬಾರಿ ರಸ್ತೆಯಲ್ಲಿ ಹೋಗುತ್ತಿರುವವರು ಅಪಘಾತಕ್ಕೀಡಾದವರ ಕಡೆ ತಿರುಗಿಯೂ ನೋಡದೆ ಹೋಗ್ತಾರೆ. ಆದ್ರೆ ಈ ಘಟನೆ ಅದಕ್ಕೆ ಭಿನ್ನ. ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದ ಬಾಲಕನ ಮೇಲೆ ಕಾರ್ ಹರಿದು ಸ್ಥಳೀಯರು ಆತನನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
Advertisement
ನವೆಂಬರ್ 13ರಂದು ಚೀನಾದ ಯಿಕಿಂಗ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಹುಡುಗನೊಬ್ಬ ರಸ್ತೆ ದಾಟುವ ವೇಳೆ ಶೂ ಲೇಸ್ ಕಟ್ಟಿಕೊಳ್ಳಲು ರಸ್ತೆ ಮಧ್ಯೆಯೇ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ್ ಕಾರ್ ಹುಡುಗ ಕುಳಿತಿದ್ದನ್ನು ಗಮನಿಸದೆ ಆತನ ಮೇಲೆ ಹರಿದಿದೆ. ತಕ್ಷಣ ಕಾರ್‍ನಲ್ಲಿದ್ದವರು ಕೆಳಗೆ ಇಳಿದು ಬಾಲಕನಿಗೆ ಏನಾಯಿತು ಎಂದು ನೋಡಿದ್ದಾರೆ. ನಂತರ ಕಾರನ್ನು ಮೇಲೆತ್ತಿ ಬಾಲಕನನ್ನು ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಪ್ರತಿಯೊಬ್ಬರೂ ಬಾಲಕನ ರಕ್ಷಣೆಗೆ ಬಂದಿದ್ದಾರೆ.
Advertisement
Advertisement
ಕೊನೆಗೆ ಅಲ್ಲಿದ್ದವರು ಒಟ್ಟಾಗಿ ಸೇರಿ ಬಾಲಕನನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ ಎಂದು ವರದಿಯಾಗಿದೆ.
Advertisement
ಬಾಲಕನ ಸ್ಕೂಲ್ ಬ್ಯಾಗ್ ಟೈರ್ ಕೆಳಗೆ ಸಿಲುಕಿದ್ದರಿಂದ ಆತನ ಜೀವ ಉಳಿದಿದೆ.
Passers-by lift car to rescue schoolboy who gets trapped under car while tying his shoelaces on the road pic.twitter.com/mGGJHla9DX
— CGTN (@CGTNOfficial) November 16, 2017