ಶೂ ಲೇಸ್ ಕಟ್ಟಿಕೊಳ್ತಿದ್ದ ಹುಡುಗನ ಮೇಲೆ ಹರಿದ ಕಾರ್- ಜನ ಆತನನ್ನ ಹೇಗೆ ರಕ್ಷಿಸಿದ್ರು ನೋಡಿ

Public TV
1 Min Read
kid run over china

ಬೀಜಿಂಗ್: ರಸ್ತೆ ಅಪಘಾತಗಳಾದಾಗ ಬಹುತೇಕ ಸಂದರ್ಭಗಳಲ್ಲಿ ಅಪಘಾತ ಮಾಡಿದವರು ಅಲ್ಲಿಂದ ಕಾಲ್ಕೀಳುತ್ತಾರೆ. ಇನ್ನೂ ಕೆಲವು ಬಾರಿ ರಸ್ತೆಯಲ್ಲಿ ಹೋಗುತ್ತಿರುವವರು ಅಪಘಾತಕ್ಕೀಡಾದವರ ಕಡೆ ತಿರುಗಿಯೂ ನೋಡದೆ ಹೋಗ್ತಾರೆ. ಆದ್ರೆ ಈ ಘಟನೆ ಅದಕ್ಕೆ ಭಿನ್ನ. ಶೂ ಲೇಸ್ ಕಟ್ಟಿಕೊಳ್ಳುತ್ತಿದ್ದ ಬಾಲಕನ ಮೇಲೆ ಕಾರ್ ಹರಿದು ಸ್ಥಳೀಯರು ಆತನನ್ನು ರಕ್ಷಣೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

kid run over china 1

ನವೆಂಬರ್ 13ರಂದು ಚೀನಾದ ಯಿಕಿಂಗ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ಹುಡುಗನೊಬ್ಬ ರಸ್ತೆ ದಾಟುವ ವೇಳೆ ಶೂ ಲೇಸ್ ಕಟ್ಟಿಕೊಳ್ಳಲು ರಸ್ತೆ ಮಧ್ಯೆಯೇ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ್ ಕಾರ್ ಹುಡುಗ ಕುಳಿತಿದ್ದನ್ನು ಗಮನಿಸದೆ ಆತನ ಮೇಲೆ ಹರಿದಿದೆ. ತಕ್ಷಣ ಕಾರ್‍ನಲ್ಲಿದ್ದವರು ಕೆಳಗೆ ಇಳಿದು ಬಾಲಕನಿಗೆ ಏನಾಯಿತು ಎಂದು ನೋಡಿದ್ದಾರೆ. ನಂತರ ಕಾರನ್ನು ಮೇಲೆತ್ತಿ ಬಾಲಕನನ್ನು ಹೊರಗೆಳೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಆ ರಸ್ತೆಯ ಮಾರ್ಗವಾಗಿ ಹೋಗುತ್ತಿದ್ದ ಪ್ರತಿಯೊಬ್ಬರೂ ಬಾಲಕನ ರಕ್ಷಣೆಗೆ ಬಂದಿದ್ದಾರೆ.

kid run over china 2

ಕೊನೆಗೆ ಅಲ್ಲಿದ್ದವರು ಒಟ್ಟಾಗಿ ಸೇರಿ ಬಾಲಕನನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿರಲಿಲ್ಲ ಎಂದು ವರದಿಯಾಗಿದೆ.

kid run over china 4

ಬಾಲಕನ ಸ್ಕೂಲ್ ಬ್ಯಾಗ್ ಟೈರ್ ಕೆಳಗೆ ಸಿಲುಕಿದ್ದರಿಂದ ಆತನ ಜೀವ ಉಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *