ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಜನ್ಮದಿನದ ಹಿನ್ನೆಲೆಯಲ್ಲಿ ಇಂದು (ಮಂಗಳವಾರ) ಜನಿಸಿದ ಗಂಡು ಮಗುವಿಗೆ ‘ನರೇಂದ್ರ’ ಎಂದು ನಾಮಕರಣ ಮಾಡಿ ದಂಪತಿಗಳು ಗಮನ ಸೆಳೆದಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರ ನಗರದ ನಿವಾಸಿಗಳಾದ ಜಯಲಕ್ಷ್ಮೀ ಹಾಗೂ ಮಹೇಂದ್ರ ಎಂಬುವವರಿಗೆ ಇಂದು ಗಂಡು ಮಗು ಜನಿಸಿದೆ. ಕಳೆದ ಎರಡು ದಿನಗಳ ಹಿಂದೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ಜಯಲಕ್ಷ್ಮೀ ದಾಖಲಾಗಿದ್ದು, ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಸ್ಪತೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ದಂಪತಿಗಳು ಮಗುವಿಗೆ ನರೇಂದ್ರ ಮೋದಿ ಎಂದು ಹೆಸರು ಇಟ್ಟಿದ್ದಾರೆ. ಇದನ್ನೂ ಓದಿ: ವಿಎಓ/ಜಿಟಿಟಿಸಿ ಪರೀಕ್ಷೆ ಹೊಸದಾಗಿ ಅರ್ಜಿ ಸಲ್ಲಿಸಲು ಸೆ.19ರಿಂದ ಅವಕಾಶ: ಕೆಇಎ
ಮಗುವಿನ ತಂದೆ ಮಹೇಂದ್ರ ಮಾತನಾಡಿ, ದೇಶದ ಪ್ರಧಾನಿಯಂತೆ ನಮ್ಮ ಮಗು ಬೆಳೆದು ನಾಡಿಗೆ ಒಳಿತು ಮಾಡಲಿ. ಮಗು ಉನ್ನತ ಮಟ್ಟದ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ ಎಂದರು. ಇದೇ ಸಂದರ್ಭ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶುಭ ಕೋರಿ ಮಗುವಿಗೆ ಒಂದು ಗ್ರಾಂ ಚಿನ್ನದ ಉಂಗುರವನ್ನು ತೊಡಿಸಿ ಆಸ್ಪತ್ರೆ ಆವರಣದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ – ನಾಳೆಗೆ ಅರ್ಜಿ ವಿಚಾರಣೆ
ಈ ಸಂದರ್ಭ ಮಾಜಿ ಸ್ಪೀಕರ್ ಕೆ.ಜೆ.ಬೋಪ್ಪಯ್ಯ ಮಾತನಾಡಿ, ಮೋದಿ ಜನ್ಮದಿನದಂದು ಜನ್ಮ ತಾಳಿದ ಪುತ್ರನಿಗೆ ‘ನರೇಂದ್ರ’ ಎಂದು ಹೆಸರು ಇಟ್ಟಿರುವುದಕ್ಕೆ ದಂಪತಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಜನ್ಮದಿನದಂದು ಕರುಳಬಳ್ಳಿಗೆ ‘ನರೇಂದ್ರ’ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ. ಈ ಮಗು ಮೋದಿ ಅವರ ಹಾಗೆ ಉನ್ನತ ಶಿಖರಕ್ಕೆ ಏರಲಿ. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳಲಿ ಎಂದು ಆಶೀರ್ವದಿಸಿದರು. ಇದನ್ನೂ ಓದಿ: ಮಹಿಳಾ ವೈದ್ಯರಿಗೆ ನೈಟ್ ಶಿಫ್ಟ್ ತೆಗೆದು ಅಧಿಸೂಚನೆ – ಮಮತಾ ಸರ್ಕಾರಕ್ಕೆ ಸುಪ್ರೀಂ ಚಾಟಿ