ಮಡಿಕೇರಿ: ಕಳೆದ ಡಿಸೆಂಬರ್ 9 ರಂದು ಮನೆಯಲ್ಲಿ ಮಲಗಿಸಿದ್ದ ಮಗು ನಿಗೂಢವಾಗಿ ಕಾಣೆಯಾಗಿತ್ತು. ಆದರೆ ಮಗು ನಾಪತ್ತೆಯಾಗಿ ಒಂದು ತಿಂಗಳಾದರೂ ಇನ್ನೂ ಪತ್ತೆಯಾಗದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚಿಕ್ಕಪೇಟೆಯಲ್ಲಿ ನಡೆದಿದೆ.
ಅಬಿಜಾ ಮತ್ತು ಅನ್ವರ್ ಹುಸೆನ್ ದಂಪತಿಯ ಮಗು ನಾಪತ್ತೆಯಾಗಿರುವುದು. ಈ ದಂಪತಿ ಅಸ್ಸಾಂ ಮೂಲದವರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ವಿರಾಜಪೇಟೆಯ ಚಿಕ್ಕಪೇಟೆಯಲ್ಲಿ ನೆಲೆಸಿದ್ದರು. ಈ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ಕೇವಲ ಹದಿನೈದು ದಿನಗಳಷ್ಟೇ ಆಗಿತ್ತು. ಡಿಸೆಂಬರ್ 9 ರಂದು ಹುಸೆನ್ ಕೆಲಸಕ್ಕೆ ಹೋಗಿದ್ದನು. ಅಬಿಜಾ ಬಾಣಂತಿಯಾಗಿರುವ ಕಾರಣ ಮನೆಯಲ್ಲಿ ಒಬ್ಬಳೆ ಇದ್ದಳು.
Advertisement
ಈ ವೇಳೆ ಸುಮಾರು ಮಧ್ಯಾಹ್ನ 12 ಗಂಟೆಗೆ ಅಬಿಜಾ ತನ್ನ ಮಗುವನ್ನ ಮನೆಯಲ್ಲಿ ಮಲಗಿಸಿ ಬಟ್ಟೆ ಒಗೆಯಲೆಂದು ಮನೆಯಿಂದ ಹೊರಗೆ ಬಂದಿದ್ದಾಳೆ. ಕೇವಲ 10 ನಿಮಿಷದ ಗ್ಯಾಪ್‍ನಲ್ಲಿ ಬಟ್ಟೆ ತೊಳೆದು ಹಿಂತಿರುಗಿ ಬಂದು ನೋಡುವಷ್ಟರಲ್ಲಿ ಮಗು ಅಲ್ಲಿ ಇರಲಿಲ್ಲ. ತಕ್ಷಣ ಅಬಿಜಾ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿರಾಜಪೇಟೆ ಪೊಲೀಸರು ಎಷ್ಟು ಹುಡುಕಿದರೂ ಮಗು ಪತ್ತೆಯಾಗಿಲ್ಲ.
Advertisement
Advertisement
ಈ ಘಟನೆ ನಡೆದು ಒಂದು ತಿಂಗಳಾಯಿತು. ಮಗು ಹುಡುಕಾಟಕ್ಕಾಗಿ ಪೊಲೀಸ್ ತಂಡ ಕೂಡ ರಚನೆ ಆಗಿದೆ. ಆದರೆ ಮಗು ನಾಪತ್ತೆ ಕೇಸ್ ಇದೀಗ ಕೊಡಗು ಪೊಲೀಸರಿಗೆ ತಲೆನೋವಾಗಿರುವುದಲ್ಲದೇ ಸವಾಲು ಕೂಡ ಆಗಿದೆ. ದೂರದ ಅಸ್ಸಾಂನಿಂದ ಕೂಲಿಗಾಗಿ ಬಂದ ಬಡ ದಂಪತಿ ಇದೀಗ ತಮ್ಮ ಮಗುವನ್ನ ಕಳೆದುಕೊಂಡಿದ್ದಾರೆ. ಕೇವಲ 10 ನಿಮಿಷದ ಅವಧಿಯಲ್ಲಿ ನಡೆದ ಮಗು ನಾಪತ್ತೆ ಕೇಸ್ ಇದೀಗ ವಿರಾಜಪೇಟೆ ಜನರನ್ನು ನಿದ್ದೆಗೆಡಿಸಿದೆ.
Advertisement
ಮನೆಯಲ್ಲಿ ಮಲಗಿಸಿದ್ದ ಮಗು ಏನಾಯ್ತು? ಕಿಡ್ನಾಪ್ ಮಾಡಲಾಗಿದ್ಯಾ? ಅಥವಾ ಮಗುವನ್ನ ನಾಯಿ ಹೊತ್ತುಕೊಂಡು ಹೋಗಿದ್ಯಾ ಎನ್ನುವ ಹತ್ತಾರು ಪ್ರಶ್ನೆಗಳು ಮೂಡಿಬಂದಿವೆ. ಆದರೆ ಘಟನೆ ನಡೆದು ಒಂದು ತಿಂಗಳಾದರೂ ಮಗು ಪತ್ತೆಯಾಗಿಲ್ಲ. ಮಗು ಬದುಕಿದೆಯೋ? ಇಲ್ಲವೋ ಎನ್ನುವ ಅನುಮಾನ ಕೂಡ ಮೂಡಿದೆ.