ಮೈಸೂರು: ಫೇಸ್‍ಬುಕ್ ಪೋಸ್ಟ್‌ನಿಂದ ಬೆಂಗಳೂರು ಪೊಲೀಸರ ಸಹಾಯದಿಂದ ಮೈಸೂರು ಪೊಲೀಸರು ಅಪ್ರಾಪ್ತೆಗೆ ನಿಶ್ಚಯವಾಗಿದ್ದ ಮದುವೆಯನ್ನು ತಡೆದಿದ್ದಾರೆ.
15 ವರ್ಷದ ಬಾಲಕಿಯೊಬ್ಬಳಿಗೆ ಮನೆಯಲ್ಲಿ ಮದುವೆ ಮಾಡುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಕುಟುಂಬಸ್ಥರ ಸಂಬಂಧದಲ್ಲೇ ಬಾಲಕಿಗೆ ಮದುವೆ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಜನವರಿ 30ರಂದು ಮದುವೆ ನಿಶ್ಚಯ ಮಾಡಲು ಮಾತುಕತೆಗೆ ಎರಡು ಕುಟುಂಬಗಳು ಸಜ್ಜಾಗಿದ್ದವು. ಬಾಲಕಿ ತನಗೆ ಮದುವೆ ಇಷ್ಟವಿಲ್ಲವೆಂದು ಬೆಂಗಳೂರು ಸಿಟಿ ಪೊಲೀಸ್ (ಬಿಸಿಪಿ) ಫೇಸ್‍ಬುಕ್ ಪೇಜ್‍ನಲ್ಲಿ ತನ್ನ ಕಷ್ಟವನ್ನು ತೋಡಿಕೊಂಡಿದ್ದಳು. ಅಷ್ಟೇ ಅಲ್ಲದೇ ತಂದೆಯ ನಂಬರ್ ಹಾಕಿ ತಿಳಿ ಹೇಳಲು ಅಪ್ರಾಪ್ತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಳು.
Advertisement
Advertisement
ಬಾಲಕಿಯ ಪೋಸ್ಟ್ ಆಧಾರದ ಮೇಲೆ ಮೈಸೂರು ಪೊಲೀಸರಿಗೆ ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಮೈಸೂರು ತಾಲೂಕಿನ ಮಾರ್ಬಳ್ಳಿಹುಂಡಿ ಗ್ರಾಮದಲ್ಲಿ ಬಾಲಕಿಯ ಮದುವೆ ಮಾತುಕತೆ ನಡೆಯುತ್ತಿತ್ತು. ಈ ವೇಳೆ ಗ್ರಾಮಕ್ಕೆ ಭೇಟಿ ನೀಡಿ ಮದುವೆ ಮಾತುಕತೆಯನ್ನು ಜಯಪುರ ಠಾಣೆಯ ಪೊಲೀಸರು ತಡೆದಿದ್ದಾರೆ.
Advertisement
ಅಪ್ರಾಪ್ತೆ ತಂದೆ ಹಾಗೂ ಕುಟುಂಬಸ್ಥರಿಗೆ ತಿಳಿ ಹೇಳಿ ಮದುವೆ ಮಾಡದಂತೆ ಸೂಚನೆ ನೀಡಿದ್ದಾರೆ. ಎರಡು ದಿನದ ಒಳಗಾಗಿ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡಬೇಕಾಗಿಯೂ ಸೂಚನೆ ನೀಡಿದ್ದಾರೆ.