ಕಾರವಾರ: 52 ವರ್ಷದ ವ್ಯಕ್ತಿಯೊಬ್ಬ 16ರ ಬಾಲಕಿಯನ್ನು ವರಿಸಿದ ಘಟನೆ ಉತ್ತರಕನ್ನಡ (UttaraKannada) ಜಿಲ್ಲೆಯ ಕಾರವಾರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮೂರು ತಿಂಗಳ ನಂತರ ತಾನು ಮದುವೆಯಾದವಳು (Marriage) ಅಪ್ರಾಪ್ತೆ ಎಂದು ತಿಳಿದು ಬಂಧನದ ಭೀತಿಯಿಂದ 52ರ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 16 ವರ್ಷದ ಅಪ್ರಾಪ್ತೆಯನ್ನು ವರಿಸಿದ 52 ವರ್ಷದ ಅನಿಲ್ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾನೆ. ಇದನ್ನೂ ಓದಿ: ಹಾಡಹಗಲೇ ರೈತ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ
ಅಂಗನವಾಡಿ ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ವಧು ಅಪ್ರಾಪ್ತೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಕೂಡಲೆ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (women and child development) ಅಧಿಕಾರಿಗಳು ವಧುವನ್ನ ಪತ್ತೆ ಹಚ್ಚಿದ್ದಾರೆ. ಬಳಿಕ ವರ ಅನಿಲ್‌ನನ್ನು ಪೋಲಿಸರು (Police) ಬಂಧಿಸಿದ್ದಾರೆ. ಇದರಿಂದ ಆತಂಕಗೊಂಡ ಅನಿಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ದಲಿತ ಬಾಲಕಿಯನ್ನ ಇಡೀ ರಾತ್ರಿ ಠಾಣೆಯಲ್ಲಿರಿಸಿ ಥಳಿಸಿದ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು
ವಧು-ವರರಿಬ್ಬರೂ ಕಾರವಾರ ನಗರದ ನಿವಾಸಿಗಳಾಗಿದ್ದಾರೆ. ಕಳೆದ ಜುಲೈ 19ರಂದು ಕಾರವಾರದ ದೇವಾಲಯವೊಂದರಲ್ಲಿ ಅದ್ಧೂರಿಯಾಗಿ ಅನಿಲ್ ವಿವಾಹವಾಗಿತ್ತು. ಮದುವೆಯಲ್ಲಿ ಭಾಗಿಯಾದ ಸಂಬಂಧಿಕರು ಸೇರಿ ಒಟ್ಟು 60 ಮಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದ್ದು, ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.
ಅಪ್ರಾಪ್ತೆ ವಧುವನ್ನು ರಕ್ಷಿಸಿ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ.