ಬೆಂಗಳೂರು: ನವಜಾತ ಶಿಶು ಕಿಡ್ನ್ಯಾಪ್ ಪ್ರಕರಣದ ಅಪರಾಧಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.
ಅಪರಾಧಿ ರಶ್ಮಿ, 5 ವರ್ಷಗಳ ಹಿಂದೆ ವಾಣಿ ವಿಲಾಸ ಆಸ್ಪತ್ರೆಯಿಂದ (Vani Vilas Hospital) ಆಗ ತಾನೆ ಹುಟ್ಟಿದ್ದ ನವಾಜಾತ ಶಿಶುವನ್ನ ಕಿಡ್ನ್ಯಾಪ್ ಮಾಡಿದ್ದಳು. ಪ್ರಕರಣದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಸಿಸಿಹೆಚ್ 51ರ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಸಂಸದನಿಗೆ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್ – ಪಂಜಾಬ್‌ನಿಂದ ಸಂಸತ್‌ಗೆ ಕೇಜ್ರಿವಾಲ್?
Advertisement
Advertisement
ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಬಸವನಗುಡಿ ಮಹಿಳಾ ಠಾಣೆಗೆ ವರ್ಗಾವಣೆಯಾಗಿತ್ತು. ತಲೆಮರೆಸಿಕೊಂಡಿದ್ದ ರಶ್ಮಿಯನ್ನು 1 ವರ್ಷದ ಬಳಿಕ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಮೀನಾಕ್ಷಿ ಮತ್ತು ಅವರ ತಂಡ ಬಂಧಿಸಿ, ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಇದೀಗ ಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ನ್ಯಾಚುರಲ್ ನಾನಿಯ ಮಾಸ್ ಟೀಸರ್ ಹಿಟ್ 3
Advertisement
ಸರ್ಕಾರದ ಪರವಾಗಿ ಪಿ.ಪಿ.ಬಿ.ಹೆಚ್.ಭಾಸ್ಕರ್ ವಾದ ಮಂಡಿಸಿದ್ದರು.