ಮಡಿಕೇರಿ: ಇಂಜೆಕ್ಷನ್ ರಿಯಾಕ್ಷನ್ ಆಗಿ ಎರಡು ತಿಂಗಳ ಮಗು ಸಾವನ್ನಪಿದೆ ಎಂಬ ಆರೋಪ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಕೇಳಿ ಬಂದಿದೆ.
ಹಾಕತ್ತೂರಿನ ನಿವಾಸಿ ಅಶೋಕ್ ಪತ್ನಿ ತೇಜಸ್ವಿನಿ ಬಾಣಂತಿತನಕ್ಕಾಗಿ ಭಾಗಮಂಡಲದ ತವರು ಮನೆಯಲ್ಲಿದ್ದರು. ಈ ವೇಳೆ ತನ್ನ ಎರಡು ತಿಂಗಳ ಮಗುವಿಗೆ ಚುಚ್ಚುಮದ್ದು ಕೊಡಿಸಿದ್ದಾರೆ. ಚುಚ್ಚುಮದ್ದು ರಿಯಾಕ್ಷನ್ ಆಗಿ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.
Advertisement
Advertisement
ಚುಚ್ಚುಮದ್ದು ಕೊಡಿಸಿ ಆಟೋದಲ್ಲಿ ಮನೆಗೆ ಹೋಗುವಷ್ಟಲ್ಲಿ ಮಗು ಸಂಪೂರ್ಣ ನಿತ್ರಾಣಗೊಂಡಿತ್ತು. ತಕ್ಷಣವೇ ಭಾಗಮಂಡಲದ ಆಸ್ಪತ್ರೆಗೆ ವಾಪಸ್ ಕರೆದುಕೊಂಡು ಬರುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ಆದರೂ ಭಾಗಮಂಡಲದ ವೈದ್ಯರು ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.
Advertisement
ದಂಪತಿ ಮಗುವನ್ನು ಮಡಿಕೇರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಪರಿಶೀಲಿಸಿ ಒಂದು ಗಂಟೆಯ ಹಿಂದೆಯೇ ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ವೈದ್ಯರು ನಿರ್ಲಕ್ಷ್ಯ ವಹಿಸಿ ಚುಚ್ಚುಮದ್ದು ನೀಡಿದ್ದೇ ಮಗು ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.