ತಮ್ಮ ಮಗುವನ್ನೇ ನೆಲಕ್ಕೆ ಬಡಿದು ಗಾಯಗೊಳಿಸಿರುವ ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ ಖ್ಯಾತ ಕಿರುತೆರೆ ನಟಿ ಚಂದ್ರಿ ಸಹಾ (Chandrika Saha). ತಾವು ಅಡುಗೆ ಮಾಡುತ್ತಿದ್ದಾಗ ಹಾಲ್ ನಲ್ಲಿ ಮಗುವಿನೊಂದಿಗೆ ಇದ್ದ ತಮ್ಮ ಪತಿ ಅಮನ್ ಮಿಶ್ರಾ (Aman Mishra) 15 ತಿಂಗಳ ಮಗುವನ್ನು ನೆಲಕ್ಕೆ ಮೂರು ಬಾರಿ ಬಡಿದು ಗಾಯಗೊಳಿಸಿದ್ದಾನೆ ಎಂದು ಚಂದ್ರಿಕಾ ಮುಂಬೈನ ಬಂಗೂರ್ (Bangor) ನಗರ ಪೊಲೀಸ್ ಠಾಣೆಗೆ ದೂರು (complaint) ನೀಡಿದ್ದಾರೆ.
ಅದಾಲತ್ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಚಂದ್ರಿಕಾ, ಗಾಯಗೊಂಡ ಮಗುವನ್ನು ಮಲಾಡ್ ಪಶ್ಚಿಮದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಮಗುವಿನ ಮೈಮೇಲೆ ಗಾಯಗಳನ್ನು ಗುರುತಿಸಿದ ನಟಿ, ಆನಂತರ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ತಮ್ಮ ಪತಿಯೇ ಮಗುವನ್ನು ಬಡಿದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ:ನಾನೇನೂ ತಪ್ಪು ಮಾಡಿಲ್ಲ- ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಸುದ್ದಿಗೆ ಶೋಭಿತಾ ರಿಯಾಕ್ಷನ್
ಚಂದ್ರಿಕಾ ಹೇಳಿಕೆಯ ಪ್ರಕಾರ, ತಮ್ಮ ಪತಿಗೆ ಆ ಮಗು ಇಷ್ಟವಿರಲಿಲ್ಲವಂತೆ. ಅಲ್ಲದೇ, 2020ರಲ್ಲಿ ಪತಿಯೊಂದಿಗೆ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರಂತೆ. ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ಚಂದ್ರಿಕಾ ಗರ್ಭಿಣಿ ಎಂಬುದು ಗೊತ್ತಾಗಿದೆ. ಆಗಲೇ ಮಗುವನ್ನು ತೆಗೆಸುವಂತೆ ಪತಿ ದುಂಬಾಲು ಬಿದ್ದಿದ್ದರಂತೆ. ಪತಿಯ ಮಾತಿಗೆ ಒಪ್ಪದೇ ಮಗುವಿಗೆ ಜನ್ಮ ನೀಡಿದ್ದೆ ಈ ಪ್ರಕರಣಕ್ಕೆ ಕಾರಣ ಎಂದು ತಿಳಿದು ಬಂದಿದೆ.