ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ

Public TV
1 Min Read
ROAD

ಬಳ್ಳಾರಿ: ರಸ್ತೆಯಲ್ಲಿ ಮಗುವಿನ ರುಂಡ ಬಿದ್ದಿರುವುದನ್ನು ಕಂಡು ಗಣಿ ನಾಡು ಬಳ್ಳಾರಿಯ ಜನರು ಭಯಭೀತರಾಗಿದ್ದಾರೆ.

ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಬಳಿಯಿರುವ ಸರ್ಕಾರಿ ಡೆಂಟಲ್ ಕಾಲೇಜ್‌ನ ಮುಂದೆ ನಿನ್ನೆ ಸಂಜೆ ಪುಟ್ಟ ಮಗುವಿನ ರುಂಡ ಒಂದು ಕಂಡು ಬಂದಿದೆ. ಅನಾಥ ಶಿಶುವಿನ ತಲೆ ಮಾತ್ರ ಪತ್ತೆಯಾಗಿದ್ದು, ಮಗು ಯಾರದ್ದು, ಹೇಗೆ ಮರಣ ಹೊಂದಿದೆ ಎಂಬ ಮಾಹಿತಿ ನಿಗೂಢವಾಗಿದೆ. ಇದನ್ನೂ ಓದಿ: ಕೋವಿಡ್ ಹೊಸ ರೂಪಾಂತರಿ ವೈರಾಣು ನಿಯಂತ್ರಣಕ್ಕೆ ಕ್ರಮ: ಸುಧಾಕರ್

baby 4

ಮಗು ಮರಣದ ಬಳಿಕ ಮಣ್ಣು ಮಾಡಿರಬಹುದು, ಬಳಿಕ ನಾಯಿಗಳು ಎಳೆದು ದೇಹವನ್ನ ತಿಂದಿರಬಹುದು ಎನ್ನಲಾಗುತ್ತಿದೆ. ಕಾರಣ ವಿಮ್ಸ್ ಮಕ್ಕಳ ಘಟಕದಲ್ಲಿ ತೀರಿಹೋದ ಮಕ್ಕಳನ್ನ ಪೋಷಕರು ಎಲ್ಲೆಂದರಲ್ಲಿ ಮಣ್ಣು ಮಾಡುವ ಸಾಮಾನ್ಯವಾಗಿದೆ. ಇದೇ ರೀತಿ ಮಣ್ಣು ಮಾಡಿದ ಬಳಿಕ ಪ್ರಾಣಿಗಳು ಹೊರ ತೆಗೆದು ಎಳೆದಾಡಿವೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ಓಮಿಕ್ರಾನ್‌ ಆತಂಕ- ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಗೊಳಿಸುವ ಯೋಜನೆ ಪರಾಮರ್ಶಿಸಲು ಪ್ರಧಾನಿ ಸೂಚನೆ

SINGLE LEG BABY

ಜನರು ಮಗುವಿನ ತಲೆ ಕಂಡು ತಮ್ಮ ಆಕ್ರೋಶ ಹೊರ ಹಾಕಿದ್ದು, ವಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಈ ರೀತಿಯ ಘಟನೆಗೆ ಕಡಿವಾಣ ಹಾಕಬೇಕು, ಆಸ್ಪತ್ರೆಯಲ್ಲಿ ಅಸುನೀಗಿದ ಮಕ್ಕಳ ಶವಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಆಗ್ರಹ ಮಾಡಿದ್ದಾರೆ.

Share This Article