ಮೈಸೂರು: ಖಾಸಗಿ ಆಸ್ಪತ್ರೆಯಲ್ಲಿ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿ ಆಸ್ಪತ್ರೆ ವೈದ್ಯರೊಡನೆ ಮಾತಿನ ಚಕಮಕಿ ನಡೆಸಿದ್ದಾರೆ.
ಮೈಸೂರಿನ ಹೆಚ್.ಡಿ.ಕೋಟೆ ಪಟ್ಟಣದ ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜ್ವರ ಕೆಮ್ಮಿನಿಂದ ಬಳಕಲುತ್ತಿದ್ದ ಒಂದೂವರೆ ವರ್ಷದ ಸುಭಾಗ್ ನನ್ನು ಭಾನುವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಏಕಾಏಕಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Advertisement
ಮಗುವಿನ ಚಿಕಿತ್ಸೆಯಲ್ಲಿ ಎಡವಟ್ಟು ಮಾಡಿ ಸಾಯಿಸಿದ್ದಾರೆಂದು ಎಂದು ಪೋಷಕರು ಇದೀಗ ಆರೋಪಿಸಿದ್ದಾರೆ. ಆದರೆ `ಮಗುವಿಗೆ ಉಸಿರಾಟದ ತೊಂದರೆ ಇದ್ದು, ಮಗುವಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಆದರೆ ವೆಂಟಿಲೇಟರ್ ಮೈಸೂರು ಆಸ್ಪತ್ರೆಯಲ್ಲಿದೆ ಅಲ್ಲಿಗೆ ಶಿಫ್ಟ್ ಮಾಡಿ ಎಂದು ಮಗುವಿನ ಪೋಷಕರಿಗೆ ಹೇಳಿದ್ದೇವು. ಅವರು ತಡ ಮಾಡಿದ ಕಾರಣ ಮಗು ಮೃತಪಟ್ಟಿದೆ’ ಎಂದು ವೈದ್ಯರು ಹೇಳುತ್ತಿದ್ದಾರೆ.
Advertisement
ಈ ಬಗ್ಗೆ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.