DistrictsLatestMain PostYadgir

ತಾಯಿ ಗರ್ಭದಲ್ಲೇ ಮಗು ಸಾವು – ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ

ಯಾದಗಿರಿ: ವೈದ್ಯರ ನಿರ್ಲಕ್ಷದಿಂದಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ತಾಯಿಯ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದೆ ಎಂದು ಗರ್ಭಿಣಿಯ ಪೋಷಕರು ಆರೋಪಿಸಿದ್ದಾರೆ.

ಯಾದಗಿರಿ ತಾಲೂಕಿನ ಹೊಸಹಳ್ಳಿ (ಆರ್) ತಾಂಡಾದ ಸಂಗೀತಾ ಹೆರಿಗೆಗಾಗಿ ನಾಲ್ಕು ದಿನಗಳ ಹಿಂದೆಯೇ ಯಾದಗರಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗಿ 2 ದಿನಗಳ ಬಳಿಕ ವೈದ್ಯರು ಹೆರಿಗೆ ಮಾಡಲು ಮುಂದಾಗಿದ್ದರು. ನಿನ್ನೆ ಹೆರಿಗೆ ಮಾಡಲು ಮುಂದಾದಾಗ ಗರ್ಭದಲ್ಲೇ ಮಗು ಮೃತಪಟ್ಟಿರುವುದಾಗಿ ಹೇಳಿ, ಮಗುವನ್ನು ತಾಯಿ ಗರ್ಭದಿಂದ ಹೊರ ತೆಗೆದಿದ್ದರು ಎನ್ನುವುದು ಪೋಷಕರ ಆರೋಪವಾಗಿದೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

ಸಂಗೀತಾ ನಿನ್ನೆಯಿಂದ ಗರ್ಭದಲ್ಲಿ ಮೃತ ಮಗುವಿನ ಶವವಿಟ್ಟುಕೊಂಡು ನೋವು ತಾಳಲಾರದೆ ಒದ್ದಾಡುತ್ತಿದ್ದರೂ ವೈದ್ಯರು ತಿರುಗಿಯೂ ನೋಡಲಿಲ್ಲ. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಗೀತಾ ಪೋಷಕರು ಆರೋಪಿಸಿದ್ದಾರೆ.

Leave a Reply

Your email address will not be published.

Back to top button