ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅನ್ವರಿ ಗ್ರಾಮದಲ್ಲಿ ಕಣ್ರೆಪ್ಪೆಯೇ ಇಲ್ಲದ, ತುಟಿ ಸೀಳಿಕೊಂಡಿರುವ ಮಗುವೊಂದು ಜನಿಸಿದೆ.
ಅನ್ವರಿ ಗ್ರಾಮದ ಶೃತಿ ನಾಗರಾಜ್ ದಂಪತಿಗೆ ಈ ಮಗು ಜನಿಸಿದೆ. ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ವೈದ್ಯರು ಯಾವುದೇ ತೊಂದರೆಯಿಲ್ಲ ಅಂತ ತಿಳಿಸಿದ್ದಾರೆ. ಅನ್ವರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಅನುವಂಶಿಕ ಹಾಗೂ ಇತರೆ ಕಾರಣಗಳಿಗೆ ಈ ರೀತಿ ಶಿಶುಗಳು ಜನಿಸಲಿದ್ದು, ಅಪರೂಪದ ಪ್ರಕರಣ ಇದಾಗಿದೆ. ಈ ರೀತಿ ವಿಚಿತ್ರವಾಗಿ ಜನಿಸಿದ ಶಿಶುಗಳನ್ನ ಸಿಂಡ್ರೋಮಿಕ ಬೇಬಿ ಅಂತ ಕರೆಯಲಾಗುತ್ತದೆ. ಕಣ್ಣು, ಮೂಗು, ಬಾಯಿ ಮೂರು ತೊಂದರೆಗಳಿಂದ ಈ ಮಗು ಜನಿಸಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಶಿಶುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement