– ಅಂಗನವಾಡಿ ಸಹಾಯಕಿಯಿಂದ ಅವಮಾನೀಯ ಕೃತ್ಯ
ರಾಮನಗರ: ಮಗು ಹಠ ಮಾಡುತ್ತಿದೆ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಮಗುವಿನ ಕೈಗೆ ಬರೆ ಎಳೆದು, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ ಮೆರೆದಿರುವ ಘಟನೆ ಕನಕಪುರ (Kanakapura) ತಾಲೂಕಿನ ಮಹರಾಜಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಮೇಶ್ ಹಾಗೂ ಚೈತ್ರಾ ದಂಪತಿಯ ಎರಡೂವರೆ ವರ್ಷದ ಮಗು ಮೇಲೆ ಅಂಗನವಾಡಿ ಸಹಾಯಕಿ ಹಲ್ಲೆ ಮಾಡಿದ್ದರು. ಅಂಗನವಾಡಿಯಲ್ಲಿ ಮಗು ಹಠ ಮಾಡ್ತಿದೆ ಎಂದು ಕೈ ಮೇಲೆ ಬರೆ ಹಾಕಿ ಬಳಿಕ ಡೈಪರ್ ಒಳಗೆ ಚಂದ್ರಮ್ಮ ಖಾರದಪುಡಿ ಹಾಕಿದ್ದರು. ಇದನ್ನೂ ಓದಿ: ಅಮೆರಿಕದ ಶಿಕ್ಷಣ ಇಲಾಖೆಯೇ ಬಂದ್ – ಮಕ್ಕಳ ಮುಂದೆಯೇ ಆದೇಶಕ್ಕೆ ಟ್ರಂಪ್ ಸಹಿ
ಅಂಗನವಾಡಿಯಿಂದ ಮಗು ಕರೆತರಲು ಹೋದಾಗ ಪೋಷಕರಿಗೆ ಹಲ್ಲೆಯ ವಿಚಾರ ತಿಳಿದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಂಗನವಾಡಿ ಸಹಾಯಕಿ ಚಂದ್ರಮ್ಮ ವಿರುದ್ಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ (Kanakapura Town Police Station) ದೂರು ದಾಖಲಾಗಿದೆ. ಇದನ್ನೂ ಓದಿ: ಮೈಸೂರು ಪಾಕ್, ಜಿಲೇಬಿ ಪ್ರಿಯರೇ ಹುಷಾರ್ – ಕ್ಯಾನ್ಸರ್, ಡಯಾಬಿಟಿಸ್‌ಗೆ ಕಾರಣವಾಗ್ತಿದ್ಯಾ ಸಿಹಿತಿಂಡಿಗಳು?