-50ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ
ಬೆಳಗಾವಿ/ಚಿಕ್ಕೋಡಿ: ಕುಡಿಯುವ ನೀರಿಗಾಗಿ ಇಲ್ಲಿನ ಜನ 20 ವರ್ಷಗಳಿಂದ ಪರದಾಡುತ್ತಿದ್ದರೂ ಕೇಳೋರೇ ಇಲ್ಲ. ಬೇಸಿಗೆ ಬಂದರೆ ಸಾಕು ಕುಡಿಯುವ ನೀರಿನ ಸಮಸ್ಯೆ ದೇವರಿಗೆ ತಲುಪುತ್ತದೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿನ ಸೌಲಭ್ಯವೇ ಇಲ್ಲ. ಜನ ಜಾನುವಾರುಗಳು ತತ್ತರಿಸಿಹೋಗಿವೆ. ಬೇಸಿಗೆಗೂ ಮುನ್ನವೇ ನೀರಿಗೆ ಹಾಹಾಕಾರ ಆರಂಭವಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ಗ್ರಾಮಸ್ಥರು ಹನಿ ನೀರಿಗೂ ಕಷ್ಟಪಡುವಂತಾಗಿದೆ. ಈ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಹಾಗೂ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳಾಗಲಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಆಗಲಿ ಅಥವಾ ಬೇರೆ ಜನಪ್ರತಿನಿಧಿಗಳಾಗಲಿ ಇವರ ಸಮಸ್ಯೆ ಕೇಳದೇ ಇರುವಷ್ಟು ಸಮಯ ಅವರಲ್ಲಿ ಇಲ್ಲ. ಚುನಾವಣೆ ಸಂದರ್ಭದಲ್ಲಿ ಇದನ್ನೆ ನೆಪವಾಗಿಟ್ಟುಕೊಂಡು ಮತ ಪಡೆಯುತ್ತಿರುವ ಅಧಿಕಾರಿಗಳಿಗೆ ಈ ಸಲ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.
Advertisement
Advertisement
ಇಲ್ಲಿನ ಜನ ಕುಡಿಯುವ ನೀರು ತರಲು ಸುಮಾರು ಒಂದು ಕಿಲೋ ಮೀಟರನಷ್ಟು ತೆರಳಿ ನೀರು ತರಬೇಕಾಗುತ್ತದೆ. ಕಲ್ಲು ಮುಳ್ಳು ಎನ್ನದೇ ಕುಡಿಯುವ ನೀರಿಗಾಗಿ ಒಂದು ಕಿಲೋಮೀಟರ್ನಷ್ಟು ದೂರ ತೆರಳಿ ಆಳವಾದ ಬಾವಿಯೊಳಗೆ ಇಳಿದು ಕುಡಿಯುವ ನೀರು ತರುತ್ತಾರೆ. ಮದ್ಯಾಹ್ನದವರೆಗೆ ನೀರು ತರಲು ಸಮಯ ಕಳೆಯುತ್ತಾರೆ. ನಂತರ ಉಪಜೀವನಕ್ಕೆ ಕೂಲಿನಾಲಿ ಮಾಡಲು ಸಮಯ ಸಿಗುವುದಿಲ್ಲ. ಇದರಿಂದ ಹೊಟ್ಟೆ ಪಾಡಿಗೂ ಪರದಾಡುತ್ತಿದ್ದಾರೆ.
Advertisement
50 ಕುಟುಂಬಗಳಿಂದಲೇ ಇಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಕೆಯಾಗಿದೆ. ಹೀಗಾಗಿ ನಮಗೂ ನೀರು ಕೊಡಿ ಎಂದು ಮನವಿ ಮಾಡಿದರೂ ಯಾರೂ ಕ್ರಮ ಕೈಗೊಂಡಿಲ್ಲವಂತೆ. ಗ್ರಾಮದ ಹತ್ತಿರವೇ ನದಿ ನೀರು ಸರಬರಾಜು ಮಾಡುವ ಪೈಪ್ ಹೋಗಿದ್ದರು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ನೀರು ಬಳಕೆ ಮಾಡಿದರೆ ಅವರ ವಿರುದ್ಧ ಕೇಸ್ ಹಾಕಲಾಗುವುದು ಎಂದು ಗ್ರಾಮ ಪಂಚಾಯಿತಿಯವರು ಧಮಕಿ ಹಾಕುತ್ತಿದ್ದಾರಂತೆ. ನಮಗೆ ಹೊಲಗದ್ದೆಗಳಿಗೆ ನೀರು ಅವಶ್ಯಕತೆ ಇಲ್ಲ. ಮೊದಲು ಕುಡಿಯುವ ನೀರು ಕೊಡಿ ಜಮ್ಮ ಜೀವ ಉಳಿಸಿ ಎಂದು ಜನರು ಮನವಿ ಮಾಡಿಕೊಂಡಿದ್ದಾರೆ.
Advertisement
ನೀರು ಕೊಡಲು ಸಂಬಂಧಪಟ್ಟವರು ಗಮನಹರಿಸುತ್ತಿಲ್ಲವೆಂದು ಮುಂಬರುವ ಲೋಕಸಭೆ ಚುನಾವಣೆಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಯಾರು ನೀರು ಕೊಡುತ್ತಾರೋ ಅವರಿಗೆ ಮಾತ್ರ ಮತ ಇಲ್ಲವಾದಲ್ಲಿ ನಾವು ಮತ ಹಾಕುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv