ಎಟಿಎಂ ಕೊರೆದು 20 ಲಕ್ಷ ಹಣ ದೋಚಿದ ಕಳ್ಳರು

Public TV
1 Min Read
SBI ATM

ಚಿಕ್ಕೋಡಿ: ಎಸ್‍ಬಿಐ ಬ್ಯಾಂಕ್‍ನ (SBI Bank) ಎಟಿಎಂ (ATM) ಕೊರೆದು 20 ಲಕ್ಷ ರೂ.ಗೂ ಹೆಚ್ಚಿನ ಹಣ ದೋಚಿದ ಘಟನೆ ನಗರದಲ್ಲಿ (Chikkodi) ನಡೆದಿದೆ.

ಅಂಬೇಡ್ಕರ್ ನಗರದ ಬಳಿ ಇರುವ ಎಟಿಎಂನ್ನು ಕಿಡಿಗೇಡಿಗಳು ಕಟರ್‌ನಿಂದ ಕಟ್ ಮಾಡಿದ್ದಾರೆ. ಬಳಿಕ ಅದರಲ್ಲಿದ್ದ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಇದಾದ ಬಳಿಕ ನಗರದ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‍ನ ಎಟಿಎಂ ದೋಚಲು ಯತ್ನಿಸಿದ್ದಾರೆ. ಹಣ ತೆಗೆಯಲು ಸಾಧ್ಯವಾಗದ ಕಾರಣ ಅಲ್ಲಿಂದ ವಾಪಾಸ್ ಆಗಿದ್ದಾರೆ. ಇದನ್ನೂ ಓದಿ: ಚೆಕ್‍ನಲ್ಲಿ 3.5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ – ಅಧಿಕಾರಿ ಅರೆಸ್ಟ್

ಕಳ್ಳತನವಾದ ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್‍ಎಸ್‍ಎಲ್ ಸಿಬ್ಬಂದಿ ಕೂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜಮ್ಮುವಿನಲ್ಲಿ ಉಗ್ರನ ಬೇಟೆಯಾಡಿದ ಭಾರತೀಯ ಸೇನೆ

Share This Article