ಚಿಕ್ಕೋಡಿ: ಅನರ್ಹ ಶಾಸಕರು ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡುತ್ತಾ ಮತ ಬೇಟೆ ಮಾಡುತ್ತಿದ್ದಾರೆ.
ಬಿಜೆಪಿ ಸೇರಲು ಅನರ್ಹ ಶಾಸಕರು ಕೋಟ್ಯಂತರ ರೂಪಾಯಿ ಪಡೆದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಚುನಾವಣಾ ರ‍್ಯಾಲಿಗಳಲ್ಲಿ ತಮ್ಮ ಮಕ್ಕಳ ಮೇಲೆ ಹಾಗೂ ದೇವರ ಮೇಲೆ ಆಣೆಪ್ರಮಾಣ ಮಾಡಿ ಮತದಾರರನ್ನು ಓಲೈಸುತ್ತಿದ್ದಾರೆ. ಮಕ್ಕಳು ಅಂದರೆ ನನಗೆ ಜೀವ. ಹೀಗಾಗಿ ಜನರ ಮನಸ್ಸಿನಿಂದ ಈ ಆರೋಪ ಹೋಗಿಸಲು ಪ್ರಮಾಣ ಮಾಡುವಂತಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಶ್ರೀಮಂತ್ ಪಾಟೀಲ್ ಆಣೆ ಪ್ರಮಾಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ತಿರುಗೇಟು ಕೊಟ್ಟಿದ್ದಾರೆ. ಜನ ಇದನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಈ ಬಾರಿ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.
Advertisement
ಚುನಾವಣೆಗೆ ದಿನ ಹತ್ರವಾಗುತ್ತಿದ್ದಂತೆ ಒಂದೆಡೆ ಹಣ ಹಂಚೋದು, ಸೀರೆ ಕುಕ್ಕರ್ ಹಂಚಿಕೆ ನಡೆಯುತ್ತಿದ್ದರೆ ಕಾಗವಾಡ ರಣಕಣದಲ್ಲಿ ಆಣೆ ಪ್ರಮಾಣವೇ ಹೆಚ್ಚಾಗುತ್ತಿದೆ.