ಬೆಳಗಾವಿ: ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ನದಿ ತೀರದ ಗ್ರಾಮಸ್ಥರು ಪ್ರವಾಹ ಭೀತಿಯಲ್ಲಿದ್ದು, ಕೃಷ್ಣಾ ತೀರದ ತೋಟದ ವಸತಿಗಳು ನಡುಗಡ್ಡೆಯಾಗಿವೆ. ಕೃಷ್ಣಾ ಹಿನ್ನೀರಿನಿಂದ ಬ್ಲಾಕ್ ಆದ ರಸ್ತೆಯ ಮೇಲೆಯೇ ವಾಹನಗಳು ಸಂಚಾರ ನಡೆಸುತ್ತಿವೆ. ಇಂಗಳಿ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಗಳು ನಡುಗಡ್ಡೆಯಲ್ಲಿಯೇ ವಾಸವಗಿದ್ದಾರೆ.
ತೋಟದ ವಸತಿ ಜಲಾವೃತವಾಗಿದ್ದರಿಂದ 2 ಅಡಿ ನೀರಿನಲ್ಲೇ ಪ್ರಯಾಣ ಮಾಡಬೇಕಾಗಿದೆ. ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬೋಟ್ ವ್ಯವಸ್ಥೆ ಕಲ್ಪಿಸಲು ಸ್ಥಳೀಯರ ಆಗ್ರಹಿಸುತ್ತಿದ್ದಾರೆ. ಕಳೆದ 3-4 ದಿನದಿಂದ ರಸ್ತೆ ಜಲಾವೃತವಾಗಿದ್ದು, ಪರ್ಯಾಯ ಮಾರ್ಗವಿಲ್ಲದೆ ಜನರು ಜೀವದ ಭಯದಲ್ಲಿಯೇ ಪ್ರಯಾಣಿಸುತ್ತಿದ್ದಾರೆ.
Advertisement
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೃಷ್ಣಾ ನದಿ ನೀರಿನ ಒಳ ಹರಿವು 2 ಲಕ್ಷ ಕ್ಯೂಸೆಕ್ ದಾಟಿದ್ದು, ನೀರು ಒಳ ಹರಿವು 2,03,000 ಕ್ಯೂಸೆಕ್ ಹೆಚ್ಚಾಗಿದೆ. ಅಲ್ಲದೇ ಹಿಪ್ಪರಗಿ ಜಲಾಶಯದಿಂದ 2,02,000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗಿದೆ.
Advertisement
ಕೃಷ್ಣಾ ಒಳಹರಿವು 2 ಲಕ್ಷ ಕ್ಯೂಸೆಕ್ ದಾಟಿದ ಹಿನ್ನೆಲೆಯಲ್ಲಿ ಪ್ರವಾಹ ಸ್ಥಿತಿ ಇರುವ ಗ್ರಾಮಗಳಿಗೆ ಬೆಳಗಾವಿ ಡಿಸಿ ಜಿಯಾವುಲ್ಲಾ ಭೇಟಿ ನೀಡಿದ್ದಾರೆ. ಈಗಾಗಲೇ ಚಿಕ್ಕೋಡಿ ಹಾಗೂ ರಾಯಭಾಗ ತಾಲೂಕಿನ 8 ಸೇತುವೆಗಳು ಮುಳುಗಡೆ ಆಗಿದೆ.
Advertisement
ಚಿಕ್ಕೋಡಿ ತಾಲೂಕಿನ ಯಡೂರು, ಕಲ್ಲೋಳ, ಇಂಗಳಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದ್ದು, ನದಿ ತೀರದ ಗ್ರಾಮಗಳಿಗೆ ಡಿಸಿ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಸಿ.ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ನೀಡಿದ್ದಾರೆ.