– ಕಾಂಗ್ರೆಸ್‌ನಲ್ಲಿ ಕೇಳಿ ಬರ್ತಿದೆ ಸತೀಶ್ ಜಾರಕಿಹೊಳಿ ಪುತ್ರಿ ಹೆಸರು?
– ಬಿಜೆಪಿಯಲ್ಲಿ ಅಣ್ಣಾ ಸಾಹೇಬ ಜೊಲ್ಲೆಗೆ ಮತ್ತೆ ಟಿಕೆಟ್
ಚಿಕ್ಕೋಡಿ: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ತಾಲೂಕು ಕೇಂದ್ರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಉತ್ಸುಕವಾಗಿದೆ. ತನ್ನ ಭದ್ರಕೋಟೆಯನ್ನು ವಶಕ್ಕೆ ಪಡೆದಿರುವ ಬಿಜೆಪಿ ಮತ್ತೆ ಅದನ್ನು ‘ಕೈ’ಗೊಪ್ಪಿಸಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಕುಂತಿದೆ.
Advertisement
ಕ್ಷೇತ್ರ ಪರಿಚಯ
ಸ್ವತಂತ್ರ ಭಾರತದಲ್ಲಿ ಬೆಳಗಾವಿ ಉತ್ತರ ಲೋಕಸಭಾ ಕ್ಷೇತ್ರವು ಬಾಂಬೆ ರಾಜ್ಯದ ಭಾಗವಾಗಿತ್ತು. 1962 ರ ಹೊತ್ತಿಗೆ ಮೈಸೂರು ರಾಜ್ಯದ ಭಾಗವಾಯಿತು. ಕರ್ನಾಟಕ ರಾಜ್ಯವಾದ ಬಳಿಕ ಚಿಕ್ಕೋಡಿ ಲೋಕಸಭಾ ಕ್ಷೇತ್ರ ರಚನೆಯಾಯಿತು. 1977 ರಲ್ಲಿ ಚಿಕ್ಕೋಡಿ ಕ್ಷೇತ್ರವು ಮೊದಲ ಚುನಾವಣೆಗೆ ಸಾಕ್ಷಿಯಾಯಿತು. ಆಗ ಕಾಂಗ್ರೆಸ್ ಗೆದ್ದಿತ್ತು. ಚಿಕ್ಕೋಡಿ ಕ್ಷೇತ್ರ 2009 ರ ಚುನಾವಣೆವರೆಗೆ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿತ್ತು. ನಂತರ 2009 ರಿಂದ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
Advertisement
Advertisement
ವಿಧಾನಸಭಾ ಕ್ಷೇತ್ರಗಳು
ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿನ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ನಿಪ್ಪಾಣಿ, ಚಿಕ್ಕೋಡಿ, ಹುಕ್ಕೇರಿ, ಕಾಗವಾಡ, ಅಥಣಿ, ರಾಯಬಾಗ, ಕುಡಚಿ, ಹುಕ್ಕೇರಿ, ಯಮಕನಮರಡಿ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಕ್ಷೇತ್ರಗಳಲ್ಲಿ 5 ಕ್ಷೇತ್ರಗಳು ಕಾಂಗ್ರೆಸ್ ಪಾಲಾದರೆ, ಕೇವಲ 3 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
Advertisement
ಚಿಕ್ಕೋಡಿ ಲೋಕಸಭೆಯು ಆರಂಭದಲ್ಲಿ ಕಾಂಗ್ರೆಸ್ ನಂತರ ಬಿಜೆಪಿ ಭದ್ರಕೋಟೆಯಾಯಿತು. 2004 ರಲ್ಲಿ ಬಿಜೆಪಿಯಿಂದ ರಮೇಶ ಜಿಗಜಿಣಗಿ, 2009 ರಲ್ಲಿ ಅದೇ ಪಕ್ಷದಿಂದ ರಮೇಶ ಕತ್ತಿ ಆಯ್ಕೆಯಾಗಿದ್ದರು. 2014 ರಲ್ಲಿ ಮೋದಿ ಹವಾ ನಡುವೆಯೂ ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿ ರಮೇಶ ಕತ್ತಿ ವಿರುದ್ಧ ಗೆಲುವು ಸಾಧಿಸಿದರು. ಬಳಿಕ 2019 ರಲ್ಲಿ ರಮೇಶ ಕತ್ತಿ ಟಿಕೆಟ್ ನೀಡದೇ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಪ್ರಕಾಶ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಗೆಲುವು ಸಾಧಿಸಿ ಹಾಲಿ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ 6,41,232 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 5,24,871 ಮತಗಳನ್ನ ಪಡೆದಿದ್ದರು. 1,16,361 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?
ಜೊಲ್ಲೆಗೆ ಮತ್ತೆ ಮಣೆ ಹಾಕಿದ ಬಿಜೆಪಿ
ಬಿಜೆಪಿ ಪಾಳಯದಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಆರ್‌ಎಸ್‌ಎಸ್ ಬಲವಿರುವ ಜೊಲ್ಲೆಗೆ ಈ ಬಾರಿಯೂ ಟಿಕೆಟ್ ನೀಡಿ ಹುರಿಯಾಳಾಗಿಸಿದೆ.
ಕಾಂಗ್ರೆಸ್ ಪಕ್ಷದಿಂದ ಲೋಕಸಭೆ ಚುನಾವಣೆ ಎದುರಿಸಲು ನಿರಾಸಕ್ತಿ ಕಾಣುತ್ತಿದೆ. ಈಗಾಗಲೇ ಪ್ರಕಾಶ ಹುಕ್ಕೇರಿ, ಶಾಸಕ ಲಕ್ಷ್ಮಣ ಸವದಿ ನಾವು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಕಾಂಗ್ರೆಸ್‌ನಿಂದ ಈ ಬಾರಿ ಮತ್ತೊಮ್ಮೆ ಪ್ರಕಾಶ ಹುಕ್ಕೇರಿ ಅವರನ್ನ ಕಣಕ್ಕೆ ಇಳಿಸುವುದು ಪಕ್ಕಾ ಎನ್ನಲಾಗುತ್ತಿದೆ. ಟಿಕೆಟ್ ರೇಸ್‌ನಲ್ಲಿ ಲಕ್ಷ್ಮಣರಾವ ಚಿಂಗಳೆ, ಪ್ರಕಾಶ್ ಹುಕ್ಕೇರಿ, ಚಿದಾನಂದ ಸವದಿ, ಪ್ರಿಯಂಕಾ ಜಾರಕಿಹೊಳಿ ಇದ್ದಾರೆ.
ಬಿಜೆಪಿಗೆ ಪ್ಲಸ್: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು, ಕ್ಷೇತ್ರದಲ್ಲಿ ಅತಿ ಹೆಚ್ಚು ಲಿಂಗಾಯತ ಮತದಾದರು ಇರುವುದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ದಿನ ಆದ್ರು ಒಂದೆ ಒಂದು ಕಾಮಗಾರಿ ಕ್ಷೇತ್ರದಲ್ಲಿ ನಡೆದಿಲ್ಲ, ಮೋದಿ ಹವಾ, ಮೋದಿ ಮುಖಕ್ಕೆ ಮನ್ನಣೆ, ರಾಮಮಂದಿರ ಉದ್ಘಾಟನೆ ಹಿನ್ನೆಲೆ ಹಿಂದುತ್ವದ ಪ್ಲಸ್.
ಮೈನಸ್: ಹಾಲಿ ಅಭ್ಯರ್ಥಿ ಕ್ಷೇತ್ರದಿಂದ ದೂರ ಉಳಿದಿದ್ದಾರೆ. ಬರಿ ನಿಪ್ಪಾಣಿಗೆ ಮಾತ್ರ ಸೀಮಿತ ಆಗಿದ್ದಾರೆ ಎನ್ನುವ ಆರೋಪ, ಕ್ಷೇತ್ರದಲ್ಲಿ 5 ಜನ ಕಾಂಗ್ರೆಸ್ ಹಾಗೂ 3 ಜನ ಮಾತ್ರ ಬಿಜೆಪಿ ಶಾಸಕರನ್ನ ಹೊಂದಿದೆ, ಹೇಳಿಕೊಳ್ಳುವ ಮಟ್ಟಿಗೆ ಯಾವುದೆ ಕೇಂದ್ರದ ಯೋಜನೆ ತಂದಿಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರ ತಂದಿರುವ ಉಚಿತ ಗ್ಯಾರಂಟಿಗಳು, ಲಕ್ಷ್ಮಣ ಸವದಿಯಂತಹ ದೊಡ್ಡ ನಾಯಕರು ಕಾಂಗ್ರೆಸ್‌ಗೆ ಹೋಗಿದ್ದು ಹಾಗೂ ಪಕ್ಷದಲ್ಲಿನ ಒಳ ಜಗಳ. ಇದನ್ನೂ ಓದಿ: Lok Sabha 2024: ಬೀದರ್‌ನಲ್ಲಿ ಬಿಜೆಪಿಗೆ ಮೈತ್ರಿ ಬಲ?- ಕಾಂಗ್ರೆಸ್‌ಗೆ ವರವಾಗುತ್ತಾ ‘ಕಮಲ’ ಟಿಕೆಟ್ ಒಳಜಗಳ?
ಕಾಂಗ್ರೆಸ್‌ಗೆ ಪ್ಲಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ, ಗ್ಯಾರಂಟಿ ಯೋಜನೆಗಳನ್ನ ನೀಡಿದ್ದು, ಲಕ್ಷ್ಮಣ ಸವದಿ ಕಾಂಗ್ರೆಸ್‌ನಲ್ಲಿ ಇರೋದು, ಬಿಜೆಪಿಯಲ್ಲಿನ ಭಿನ್ನಾಭಿಪ್ರಾಯ, 5 ಕಾಂಗ್ರೆಸ್ ಶಾಸಕರನ್ನ ಹೊಂದಿರುವುದು.
ಮೈನಸ್: ಸರ್ಕಾರ ಬಂದರೂ ಸ್ಥಳೀಯ ಮಟ್ಟದಲ್ಲಿ ಯಾವುದೇ ಕೆಲಸ ಆಗಿಲ್ಲಾ, ಬರಿ ಗ್ಯಾರಂಟಿ ಯೋಜನೆಗಳಿಗೆ ಮನ್ನಣೆ ಕೊಟ್ಟು ಕ್ಷೇತ್ರದಲ್ಲಿನ ಕೆಲಸಗಳನ್ನ ಸ್ಥಗಿತ ಮಾಡಿರುವುದು, ಕ್ಷೇತ್ರದ ಏತ ನೀರಾವರಿ ಯೋಜನೆಗಳಿಗೆ ಹಣ ನೀಡದೆ ಇರುವುದು, ಬರ ನಿರ್ವಹಣೆಯಲ್ಲಿ ಸರ್ಕಾರದಿಂದ ನಿರ್ಲಕ್ಷ್ಯ ಧೋರಣೆ, ಕಾಂಗ್ರೆಸ್ ಶಾಸಕರಿದ್ದರೂ ಕ್ಷೇತ್ರದಲ್ಲಿ ಇದುವರೆಗೂ ಒಂದೇ ಒಂದು ಕೆಲಸ ಮಾಡದೆ ಇರೋದು.
ಮತದಾರರ ಸಂಖ್ಯೆ ಎಷ್ಟು?
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,32,346 ಇದೆ. ಪುರುಷ ಮತದಾರರು- 8,76,983 ಹಾಗೂ ಮಹಿಳಾ ಮತದಾರರು- 8,55,292, ತೃತೀಯ ಲಿಂಗಿ ಮತದಾರರು- 11 ಇದ್ದಾರೆ.
ಜಾತಿವಾರು ಲೆಕ್ಕಾಚಾರ
ಲಿಂಗಾಯತ- 4,10,000
ಕುರುಬ- 1,70,000
ಎಸ್.ಸಿ- 1,65,000
ಎಸ್.ಟಿ.- 90,000
ಮುಸ್ಲಿಂ- 1,80,000
ಜೈನ್- 1,30,000
ಮರಾಠಾ- 1,70,000
ಇತರೆ- 2,55,000