ಚಿಕ್ಕೋಡಿ(ಬೆಳಗಾವಿ): ಆಸ್ತಿ ವಿವಾದ ಹಾಗೂ ಹಣ ನೀಡದೇ ಇರುವುದರಿಂದ ಬೇಸತ್ತು ಹೆತ್ತ ತಂದೆಯೇ ಮಗನನ್ನ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದ ಯಮನಪ್ಪ ಸಿದ್ದಪ್ಪ ನಿಡಗುಂದಿ(39)ಮೃತ ರ್ದುದೈವಿ ಮಗ. ಈತನ ತಂದೆ ಸಿದ್ದಪ್ಪ ನೀಡಗುಂದಿ ಕಬ್ಬು ಕಟಾವು ಮಾಡುವ ಆಯುಧದಿಂದ ಮಗನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಆಸ್ತಿಗಾಗಿ ಗಲಾಟೆ ಹಾಗೂ ಹಣದ ವಿಷಯದಲ್ಲಿ ಇಬ್ಬರಲ್ಲೂ ವೈಮನಸ್ಸಿತ್ತು. ಹಣದ ವಿಷಯಕ್ಕಾಗಿ ಆಗಾಗ ಜಗಳ ನಡೆದಿತ್ತು. ಇದರಿಂದ ಬೇಸತ್ತ ತಂದೆ ಸಿದ್ದಪ್ಪ ನೀಡಗುಂದಿ, ಮಗ ರಾತ್ರಿ ಮಲಗಿದ್ದಾಗ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಅಂಕಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.