ವಿಜಯನಗರ ಆಯ್ತು, ಇದೀಗ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟಗಾರರಿಂದ ಒತ್ತಾಯ!

Public TV
2 Min Read
CHIKKODI

ಚಿಕ್ಕೋಡಿ: ಬೆಳಗಾವಿ ನಾಯಕರು ಮನಸ್ಸು ಮಾಡಿದರೆ ರಾಜ್ಯದ ಸರ್ಕಾರವನ್ನು ಬದಲಿಸುವ ಶಕ್ತಿಯನ್ನು ಹೊಂದಿದ್ದಾರೆ. ಹಲವಾರು ದಶಕಗಳಿಂದ ಚಿಕ್ಕೋಡಿ ಜಿಲ್ಲೆ ಮಾಡಿ ಎಂದು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಲ್ಲೇ ಇವೆ. ಆದರೆ, ಇನ್ನೂ ಕೂಡ ಜಿಲ್ಲೆಯ ಕನಸು ನನಸಾಗದೆ ಉಳಿದಿದೆ. ಹೀಗಾಗಿ ಜನಪ್ರತಿನಿಧಿಗಳ ವಿರುದ್ಧ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

CHIKODI

ರಾಜ್ಯದಲ್ಲಿ ಆಡಳಿತಾತ್ಮಕವಾಗಿ, ಜನಸಂಖ್ಯಾನುಸಾರವಾಗಿ, ವಿಸ್ತಿರ್ಣಾನುಸಾರವಾಗಿ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 14 ತಾಲೂಕುಗಳಿವೆ. ಬಹುಷ: ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಷ್ಟು ಪ್ರಮಾಣದ ತಾಲೂಕುಗಳು ಉಪವಿಭಾಗಗಳು ಇರಲಿಕ್ಕಿಲ್ಲ. ಸದ್ಯ ಬಳ್ಳಾರಿ ಜಿಲ್ಲೆಯ ವಿಭಜನೆ ಈಗ ಬೆಳಗಾವಿಯಲ್ಲಿ ಬೆಂಕಿ ಎಬ್ಬಿಸಿದೆ. ಚಿಕ್ಕೋಡಿಯೂ ಸಹ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಹಲವಾರು ವರ್ಷಗಳ ಕೂಗಿಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸ್ಪಂದನೆ ಇಲ್ಲದ ಕಾರಣದಿಂದ ಜಿಲ್ಲಾ ವಿಭಜನೆಯ ಕನಸು ಕನಸಾಗೆ ಉಳಿದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ

CHIKKODI 3

ಸಚಿವ ಆನಂದ್ ಸಿಂಗ್, ಸಾಕಷ್ಟು ವಿರೋಧದ ನಡುವೆಯೂ ರಾಜ್ಯದ 31 ನೇ ಜಿಲ್ಲೆಯಾಗಿ ವಿಜಯನಗರ ಪ್ರತ್ಯೇಕ ಮತ್ತು ಸ್ವತಂತ್ರ ಜಿಲ್ಲೆಯಾಗಿ ರಚನೆಯಾಗಿದೆ. ಬೆಳಗಾವಿಯ ಮಟ್ಟಕ್ಕೆ ಹೇಳುವುದಾದರೆ ಜಿಲ್ಲಾ ವಿಭಜನೆಗೆ ರಾಜಕೀಯ ಹಿತಾಸಕ್ತಿಯ ಕೊರತೆಯಂತೂ ಎದ್ದು ಕಾಣುತ್ತಿದೆ. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಚಿಕ್ಕೋಡಿ ಉಪವಿಭಾಗದ ಹುಕ್ಕೇರಿ, ನಿಪ್ಪಾಣಿ, ರಾಯಬಾಗ, ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ತಾಲೂಕಿನ ಜನ ಸಂಪೂರ್ಣವಾಗಿ ಅವಲಂಬಿತವಾಗಿರುವುದು ಮಹಾರಾಷ್ಟ್ರದ ಮಾರುಕಟ್ಟೆಗಳು. ಏಕೆಂದರೆ ಇವರು ಬೆಳಗಾವಿ ಜಿಲ್ಲಾ ಮಾರುಕಟ್ಟೆಗಳಿಗೆ ತೆರಳಬೇಕಾದರೆ ನೂರಾರು ಕಿ.ಮೀ ಕ್ರಮಿಸಬೇಕು ಹೀಗಾಗಿ ಈ ಭಾಗದ ಜನ ಅವಲಂಬಿತವಾಗಿರುವುದು ಮಹಾರಾಷ್ಟ್ರದ ಮಿರಜ, ಸಾಂಗಲಿ, ಕೊಲ್ಲಾಪುರ, ಇಚಲಕರಂಜಿ ಅಂತಹ ದೊಡ್ಡ ನಗರಗಳ ಮೇಲೆ ಹೀಗಾಗಿ ನಮ್ಮ ತೆರಿಗೆ ಹಣವೆಲ್ಲ ಮಹಾರಾಷ್ಟ್ರ ಪಾಲಾಗುತ್ತಿದ್ದು, ಕರ್ನಾಟಕಕ್ಕೆ ಇದರಿಂದ ಹಾನಿಯೇ ಹೊರತು ಲಾಭವಿಲ್ಲ. ಇದನ್ನೂ ಓದಿ: ಶಿರಸಿಯಲ್ಲಿ ಶತಕ ದಾಟಿದ ಡೀಸಲ್ ದರ-ಸಾಗಾಟ ವೆಚ್ಚ ದುಬಾರಿ

CHIKKODI 4

ಜಿಲ್ಲೆಯ ಜನಪ್ರತಿನಿಧಿಗಳ ವೈಮನಸ್ಸಿನಿಂದ ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದರು ಸಹ ಚಿಕ್ಕೋಡಿ ಮಾತ್ರ ಜಿಲ್ಲೆಯಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 14 ಶಾಸಕರು ಇದ್ದರು ಪ್ರಯೋಜನ ಮಾತ್ರ ಏನಿಲ್ಲ. ಮುಂಬರುವ ಬೆಳಗಾವಿ ಅಧಿವೇಶನ ನಡೆಯುವಷ್ಟರಲ್ಲಿ ಚಿಕ್ಕೋಡಿ ಜಿಲ್ಲೆಯಾಗಬೇಕು ಒಂದು ವೇಳೆ ಆಗದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ. ಹಲವಾರು ವರ್ಷಗಳಿಂದ ಜಿಲ್ಲೆಯಾಗಬೇಕೆಂದು ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಬಳ್ಳಾರಿ ವಿಭಜನೆ ಬಳಿಕ ಮತ್ತಷ್ಟು ಆಕ್ರೋಶಗೊಂಡ ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ನಮ್ಮ ಕಾಲಮಾನದವರಿಗೆ ಜಿಲ್ಲೆಯಂತೂ ಆಗಲಿಲ್ಲ ಮುಂದಿನ ಪೀಳಿಗೆಯವರಿಗಾದರೂ ಅನಕೂಲವಾಗಲಿ ಎಂಬುವುದು ಚಿಕ್ಕೋಡಿ ಉಪವಿಭಾಗದ ಜನರ ಕೂಗಾಗಿದ್ದು, ಇದಕ್ಕೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದನೆ ನೀಡುತ್ತದೆ ಎಂದು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *