ಚಿಕ್ಕೋಡಿ/ಬೆಳಗಾವಿ: ಮದುವೆ ಸಂಭ್ರಮದ ಜೊತೆಗೆ ಮದುವೆ ಮನೆಯಲ್ಲೇ ಮತದಾನ ಜಾಗೃತಿ ಮೂಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಶಿಂದಿಕುರಬೇಟ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಿದ್ಧಾರೂಡ ಹುಡೇದ ಹಾಗೂ ಶಶಿಕಲಾ ನವ ಜೋಡಿಗಳ ಮದುವೆ ಇಂದು ನಡೆದಿದೆ. ಈ ನವವಧು-ವರರು ಹಸೆಮಣೆ ಏರಿದ ಕ್ಷಣದಲ್ಲಿ ಮತದಾನ ಜಾಗೃತಿ ಮಾಡುವ ಮೂಲಕ ವಿಶಿಷ್ಟ ಮದುವೆ ಆಚರಣೆ ಮಾಡಿದ್ದಾರೆ. ಜೊತೆಗೆ ಮದುವೆಗೆ ಆಗಮಿಸಿದವರಿಗೆ ಕಡ್ಡಾಯ ಮತದಾನ ಮಾಡಬೇಕು ಹಾಗೂ ತಮ್ಮ ಮತವನ್ನ ಮಾರಿಕೊಳ್ಳದಂತೆ ಶಪಥವನ್ನು ಕೂಡ ಮಾಡಿಸಲಾಗಿದೆ.
Advertisement
Advertisement
ಅಷ್ಟೇ ಅಲ್ಲದೇ ಮದು ಮಂಟಪದ ತುಂಬೆಲ್ಲಾ ಮತದಾನ ಜಾಗೃತಿ, ಮತದಾನದ ಮೌಲ್ಯ, ಸಮೃದ್ಧ ದೇಶಕ್ಕಾಗಿ ಮತದಾನದ ಮಾಡಲೇಬೇಕು ಎಂದ ಬರಹದ ಬ್ಯಾನರ್ ಗಳನ್ನ ಹಾಕಲಾಗಿತ್ತು. ‘ನಿಮ್ಮ ತೋರುಬೆರಳಿಗೆ ಭಾರತದ ಭವಿಷ್ಯ ಬರೆಯುವ ತಾಕತ್ತಿದೆ. ಆ ತಾಕತ್ತನ್ನು ಮಾರಾಟಕ್ಕೆ ಇರಬೇಡಿ’, ‘ವ್ಯಕ್ತಿ, ಜಾತಿ, ಧರ್ಮ ಮತ್ತು ಪಂತ ನೋಡಿ ಮತ ಚಲಾಯಿಸಬೇಡಿ, ಕೇವಲ ಭಾರತಕ್ಕಾಗಿ ಮತ ಚಲಾಯಿಸಿ’, ಎಂದು ಬರೆದು ಹಾಕಿದ್ದಾರೆ.
Advertisement
Advertisement