ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ (Nandi Parvatha Ashram) ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸುವಂತೆ ಬಿಜೆಪಿ ಮುಖಂಡರೂ (BJP Leader) ಆಗಿರುವ ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಒತ್ತಾಯಿಸಿದ್ದಾರೆ.
ಚಿಕ್ಕೋಡಿಯಲ್ಲಿ (Chikkodi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕವಟಗಿಮಠ, ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕೆಂದು ಚಿಕ್ಕೋಡಿ ಬಿಜೆಪಿ ಘಟಕ ಒತ್ತಾಯಿಸುತ್ತದೆ. ಸ್ವಾಮೀಜಿಗಳಿಗೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸ್ವಾಮೀಜಿಗಳು ನಾಪತ್ತೆಯಾದ ದಿನವೇ ಪೊಲೀಸರು (Police) ತಕ್ಷಣ ಕ್ರಮ ಕೈಗೊಂಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಪೊಲೀಸರಿಗೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತೆ, ಪ್ರಾಥಮಿಕ ಮಾಹಿತಿಗಳೂ ಸಿಕ್ಕಿರುತ್ತೆ. ಅವರು ಮನಸ್ಸು ಮಾಡಿದ್ದರೆ, ಸ್ವಾಮೀಜಿ ಹತ್ಯೆಯಾಗೋದನ್ನ ತೆಡೆಯಬಹುದಿತ್ತು. ಸರ್ಕಾರ ಸರ್ವಪಕ್ಷ ಸಭೆ ಕರೆದು ಸ್ವಾಮೀಜಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು, ಆರೋಪಿಗಳನ್ನ ಕಠಿಣವಾಗಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಜೈನಮುನಿ ಕೊಲೆ ಖಂಡಿಸಿ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ
ಜಿನಸೇನ ಭಟ್ಟಾರಕ, ಧರ್ಮಸೇನ ಭಟ್ಟಾರಕ, ಲಕ್ಷ್ಮೀಸೇನ ಭಟ್ಟಾರಕ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಪ್ರತಿಭಟನೆಯಲ್ಲಿ 10 ಸಾವಿರ ಜನ ಭಾಗಯಾಗಿದ್ದರು. ಇದನ್ನೂ ಓದಿ: ಜೈನ ಧರ್ಮ ಸಂಪ್ರದಾಯದಂತೆ ಜೈನಮುನಿ ಅಂತ್ಯಸಂಸ್ಕಾರ
ಇದೇ ತಿಂಗಳ ಜುಲೈ 6ರಂದು ನಂದಿ ಪರ್ವತ ಆಶ್ರಮದ ಜೈನಮುನಿಗಳು ನಾಪತ್ತೆಯಾಗಿದ್ದರು. ಸ್ವಾಮೀಜಿಯ ನಾಪತ್ತೆಯ ಕುರಿತು ಭಕ್ತರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು. ಬಳಿಕ ಜೈನಮುನಿಗಳ ಮೃತದೇಹವನ್ನು ಖಟಕಬಾವಿಯ ಗದ್ದೆಯಲ್ಲಿದ್ದ ತೆರೆದ ಕೊಳವೆಬಾವಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದರು.
Web Stories