ಚಿಕ್ಕಮಗಳೂರು: ಅಡಿಕೆ ಕದಿಯಲು ಹೋಗಿ ಸುಮಾರು 70 ಮರಗಳನ್ನೇ ಕಡಿದಿದ್ದ ಕಳ್ಳನನ್ನು ಹಿಡಿದು ಸ್ಥಳೀಯರು ರಸ್ತೆಯುದ್ದಕ್ಕೂ ಥಳಿಸಿ ಠಾಣೆಗೆ ಕರೆದೊಯ್ದ ಘಟನೆ ಎನ್‌ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಶ್ರೀನಿವಾಸ್ ಹಲ್ಲೆಗೊಳಗಾದ ಆರೋಪಿ. ಈತ ಬಾಳೆಹೊನ್ನೂರಿನಲ್ಲಿ ಹಲವು ದಿನಗಳಿಂದ ಅಡಿಕೆ ಕಳ್ಳತನ ಮಾಡುತ್ತಿದ್ದ. ಅಡಿಕೆಗಳನ್ನು ಕದಿಯಲು ಮರಗಳನ್ನೇ ಕಡಿಯುತ್ತಿದ್ದ. ತೋಟದ ಮಾಲೀಕರು ಮರಗಳು ಧರೆಗುರುಳಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಮತ್ತೊಮ್ಮೆ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳನನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್
- Advertisement 2-
- Advertisement 3-
- Advertisement 4-
ಹತ್ತಾರು ವರ್ಷಗಳಿಂದ ಬೆಳೆಸಿದ್ದ 70 ಅಡಿಕೆ ಮರಗಳನ್ನು ಕಡಿದುಹಾಕಿದ್ದಾನೆ. 3,500 ಕೆಜಿಗೂ ಅಧಿಕ ಹಸಿ ಅಡಿಕೆಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಬಾಳೆಹೊನ್ನೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಬಡವನೆಂದು ತಿಳಿದಿದ್ದರೆ ನಾವು ಕಳ್ಳತನ ಮಾಡುತ್ತಿರಲಿಲ್ಲ- ಕ್ಷಮಾಪಣಾ ಪತ್ರ ಬರೆದ ಕಳ್ಳರು