ಚಿಕ್ಕಮಗಳೂರು: ನಗರದ ಡಿ.ಆರ್ ಮೈದಾನದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಭರ್ಜರಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಡಿ.ಆರ್ ಮೈದಾನದಲ್ಲಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ಕ್ರೀಡಾ ಕೂಟ ಆಯೋಜಿಸಲಾಗಿತ್ತು. ಈ ವೇಳೆ ಸಂಭ್ರಮದಲ್ಲಿದ್ದ ಮಹಿಳಾ ಪಿ.ಎಸ್.ಐ ಹಾಗೂ ಪೇದೆಗಳು ‘ಹೇ ಹುಡುಗ ಯಾಕಿಂಗ್ ಕಾಡ್ತಿ’ ಎನ್ನುವ ಹಾಡಿಗೆ ಹಜ್ಜೆ ಹಾಕಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಮಹಿಳಾ ಪೊಲೀಸ್ ಪೇದೆಗಳು ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಜಾಗದಲ್ಲಿ ಧೂಳು ಕಾಣಿಸಿಕೊಂಡಿತ್ತು. ಇದ್ದರಿಂದಾಗಿ ಕೆಲವರು ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಹೆಜ್ಜೆ ಹಾಕಿದ್ದಾರೆ. ನೀಲಿ ಜರ್ಸಿ ಹಾಗೂ ಕೆಂಪು ಟಿಶರ್ಟ್ ತೊಟ್ಟ ಚಿಕ್ಕಮಗಳೂರಿನ ಪೊಲೀಸ್ ಸಿಬ್ಬಂದಿಯ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv