ಚಿಕ್ಕಮಗಳೂರು: ಕಡೂರು (Kaduru) ತಾಲೂಕಿನ ಸಖರಾಯಪಟ್ಟಣ ಸಮೀಪದ 2800 ಎಕರೆಗೂ ಹೆಚ್ಚು ವಿಸ್ತೀರ್ಣದ ಐತಿಹಾಸಿಕ ಅಯ್ಯನಕೆರೆ ಹಾಗೂ ಮದಗದ ಕೆರೆ (Madagada Kere, Ayyana Kere) ತುಂಬಿ ಕೋಡಿ ಬಿದ್ದಿವೆ.
ಏಳು ಗುಡ್ಡಗಳ ಮಧ್ಯೆ ಇರುವ ಬೃಹತ್ ಕೆರೆಗಳು ತುಂಬಿ ಕೋಡಿ ಬಿದ್ದಿವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಳ್ಳಯ್ಯನಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಅಯ್ಯನಕೆರೆ ಹಾಗೂ ಮದಗದ ಕೆರೆ ತುಂಬಿ ಕೋಡಿ ಬಿದ್ದಿದೆ. ಇದರಿಂದ ಕೆರೆ ಸುತ್ತಮುತ್ತಲಿನ 34 ಹಳ್ಳಿಯ ಜನ-ಜಾನುವಾರುಗಳ ನೀರಿನ ಬವಣೆ ತಪ್ಪಿದಂತಾಗಿದೆ. ಇದನ್ನೂ ಓದಿ: ಟಿಬಿ ಡ್ಯಾಂನಿಂದ 1.24 ಲಕ್ಷ ಕ್ಯೂಸೆಕ್ ಹೊರಹರಿವು – ರಾಯರು ತಪ್ಪಸ್ಸು ಮಾಡಿದ್ದ ಜಪದ ಕಟ್ಟೆ ಜಲಾವೃತ
ಅಯ್ಯನಕೆರೆ 2036 ಎಕರೆ ವಿಸ್ತೀರ್ಣ ಹಾಗೂ 36 ಅಡಿ ಆಳವಿದೆ. ಮದಗದ ಕೆರೆ 60 ಅಡಿ ಆಳ ಹಾಗೂ 843 ಎಕರೆ ವಿಸ್ತೀರ್ಣ ಹೊಂದಿದೆ. ರೈತರು ಕೆರೆ ತುಂಬುತ್ತೋ ಇಲ್ವೋ ಎಂಬ ಆತಂಕದಲ್ಲಿದ್ದರು. ಆದರೆ, ಈ ಬಾರಿ ಉತ್ತಮ ಮಳೆಯಾದ ಪರಿಣಾಮ ಪ್ರತಿ ವರ್ಷ ಆಗಸ್ಟ್ ಮಧ್ಯದಲ್ಲಿ ಕೋಡಿ ಬೀಳ್ತಿದ್ದ ಕೆರೆ ಈ ವರ್ಷ ಜುಲೈ ಕೊನೆಯಲ್ಲೇ ಕೋಡಿ ಬಿದ್ದಿದೆ. ಕೆರೆ ಕೋಡಿ ಬಿದ್ದಿರೋದ್ರಿಂದ 2 ಕೆರೆ ಸುತ್ತಲಿನ ಸುಮಾರು 34ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯೋ ನೀರು ಹಾಗೂ ಬೆಳೆಗೆ ಸಮಸ್ಯೆ ಇಲ್ಲದಂತಾಗಿದೆ.
ಅಯ್ಯನಕೆರೆ ತುಂಬಿ ಕೋಡಿ ಬಿದ್ದಿ ನೀರು ವೇದಾವತಿ ನದಿ ಮೂಲಕ ವಾಣಿ ವಿಲಾಸ ಜಲಾಶಯಕ್ಕೆ ಸೇರುತ್ತದೆ. ಕೆರೆಗಳು ಕೋಡಿ ಬಿದ್ದಿದ್ದರಿಂದ ಪ್ರವಾಸಿಗರು ಆಗಮಿಸಿ ಸ್ವಲ್ಪ ಕಾಲ ಅಲ್ಲಿ ವಿಹರಿಸಿ ಹೋಗುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯ | ರೈತರ ಹೋರಾಟದ ಎಚ್ಚರಿಕೆ ಬಳಿಕ KRSನಿಂದ ನಾಲೆಗಳಿಗೆ ನೀರು