ಚಿಕ್ಕಮಂಗಳೂರು: ಕಾಫಿ ನಾಡಿನ ಯುವಕ, ಯುವತಿಯರಿಗೆ ಗುಂಡಿ ರಸ್ತೆ ಕಂಟಕ ಎದುರಾಗಿದೆ. ಹೆಣ್ಣು ಕೊಡುತ್ತಿಲ್ಲ, ಗಂಡು ಬರುತ್ತಿಲ್ಲ, ಮದುವೆಯೂ ಆಗುತ್ತಿಲ್ಲ. ಜಿಲ್ಲಾ ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರೋ ಕುಗ್ರಾಮ. ನೆಂಟರು, ಶಿಕ್ಷಕರು ಸೇರಿದಂತೆ ಬೇರೆ ಊರಿನ ಕೂಲಿ ಕಾರ್ಮಿಕರಿಗೂ ಆ ಊರು ಎಂದರೆ ಭಯ. ಆ ಊರಿನ ಯುವಕ-ಯುವತಿಯರಿಗೆ ಕಂಕಣ ಭಾಗ್ಯವಿಲ್ಲ. ವಧು-ವರರ ಕಡೆಯವರು ಬರುತ್ತಾರೆ, ನೋಡುತ್ತಾರೆ-ಹೋಗುತ್ತಾರೆ. ನಿಮ್ಮೂರಿಗೆ ಹೋಗೋಕೆ ಬೇರೆ ದಾರಿ ಇಲ್ವಾ ಅಂತಾರೆ. ರಸ್ತೆಯಿಂದ ಬದುಕಿನ ಸಂಬಂಧಗಳೇ ಮುರಿದು ಬೀಳುತ್ತಿವೆ.
ಗುಂಡಿ ಬಿದ್ದ ರಸ್ತೆ, ದೊಡ್ಡ ಗಾತ್ರದ ಕಲ್ಲು, ಡಾಂಬರ್ ಕಾಣದ ರಸ್ತೆಗಳು. ಕಿತ್ತೋಗಿರುವ ರಸ್ತೆಗಳು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೆರಣಗೋಡು ಗ್ರಾಮಕ್ಕೆ ಸೇರಿದ್ದು. ಈ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿವೆ. ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೈಕ್. ಕಾರು. ಜೀಪ್‍ಗಲಲ್ಲಿ ಹೋಗಬೇಕಾದ್ರೂ ಸರ್ಕಸ್ ತಪ್ಪಿದ್ದಲ್ಲ. ಇನ್ನು ನಡೆದು ಕೊಂಡು ಹೋದ್ರೂ ಡ್ಯಾನ್ಸ್ ಮಾಡಲೇಬೇಕು. ಈ ಊರಿಗೆ ಹೋಗ್ಬೇಕು ಎಂದರೆ ಆಟೋದವರು ಮುಲಾಜಿಲ್ಲದೆ ಬರಲ್ಲ ಅಂತಾರೆ. ಮೊದಲು 100-200ಕ್ಕೆ ಬರ್ತಿದ್ದ ಆಟೋ ಚಾಲಕರು ಈಗ 400-500 ಕೊಡುತ್ತೇವೆ ಎಂದರು ಬರಲ್ಲ ಎನ್ನುವಷ್ಟು ಪ್ರಮಾಣದಲ್ಲಿ ರಸ್ತೆ ಹಾಳಾಗಿದೆ.
Advertisement
Advertisement
ಬೆರಣಗೋಡು ಗ್ರಾಮದ ಕೆಟ್ಟ ರಸ್ತೆಯಿಂದ ಗ್ರಾಮದ ಯುವಕ-ಯುವತಿಯರಿಗೆ ಮದುವೆಯೇ ಆಗುತ್ತಿಲ್ಲ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಮದುವೆ ವಯಸ್ಸಿಗೆ ಬಂದ ಯುವಕ-ಯುವತಿಯರಿದ್ದಾರೆ. ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ವಧು-ವರರ ಕಡೆಯವರು ಯಾರೂ ಬರುತ್ತಿಲ್ಲ. ಸಂಬಂಧಿಕರು ಸಹ ಗ್ರಾಮಕ್ಕೆ ಬರಲು ಹಿಂದೂ ಮುಂದೆ ನೋಡುತ್ತಿದ್ದಾರೆ. ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಹೀಗಾಗಿ ಜನರೇ ರಸ್ತೆಗೆ ಮಣ್ಣು ಹಾಕಿದರು ಆದರೆ ಅದು ಹಾಳಾಗಿದೆ.
Advertisement
Advertisement
ಈ ಗ್ರಾಮ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಗೆ ಬರಲಿದೆ. ವಿಧಾನಸಭಾ ಕ್ಷೇತ್ರ ಮೂಡಿಗೆರೆಯದ್ದಾಗಿದ್ದು, ಹೀಗಾಗಿ ಯಾವ ಅಧಿಕಾರಿಗಳು ಆ ಬಗ್ಗೆ ಯೋಚನೆ ಕೂಡ ಮಾಡ್ತಿಲ್ಲ. ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ನೋ ಯೂಸ್. ವ್ಯವಸ್ಥೆಯ ಬೇಜವಾಬ್ದಾರಿಯಿಂದ ಬೇಸತ್ತಿರೋ ಹಳ್ಳಿಗರು ದಯವಿಟ್ಟು ನಮಗೊಂದು ರಸ್ತೆ ನಿರ್ಮಿಸಿಕೊಡಿ ಎಂದು ಮನವಿಕೊಂಡಿದ್ದಾರೆ.