ಚಿಕ್ಕಮಗಳೂರು: ಬಿಸಿಲಿನಿಂದ ಕಂಗೆಟ್ಟಿದ್ದ ಕಾಫಿನಾಡು ಚಿಕ್ಕಮಗಳೂರಿಗೆ ಇಂದು ವರುಣದೇವ ಕೃಪೆ ತೋರಿದ್ದು ಸುಮಾರು 45 ನಿಮಿಷಗಳ ಕಾಲ ಧಾರಾಕಾರವಾಗಿ ಮಳೆ ಸುರಿದೆ.
ಚಿಕ್ಕಮಗಳೂರು ನಗರ, ಮೂಡಿಗೆರೆ ತಾಲೂಕಿನ ಬಣಕಲ್, ಆಲ್ದೂರು ಸೇರಿದಂತೆ ಕೆಲ ಭಾಗ ಹಾಗೂ ಕಡೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆ-ಚರಂಡಿ ಸೇರಿದಂತೆ ತಗ್ಗು ಪ್ರದೇಶಗಲ್ಲಿ ನೀರು ಹರಿದಿದೆ.
ಚಿಕ್ಕಮಗಳೂರು ನಗರ, ಕಡೂರು ಹಾಗೂ ಮೂಡಿಗೆರೆ ತಾಲೂಕಿನ ಬಣಕಲ್ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಜಿಲ್ಲೆಯ ಉಳಿದ ಮಲೆನಾಡು ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು, ಕೆಲ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕಾಫಿತೋಟದ ಮಾಲೀಕರು ಹಾಗೂ ರೈತರು ಮಳೆಗಾಗಿ ಆಕಾಶ ನೋಡ್ತಿದ್ರು, ಈ ಮಧ್ಯೆಯೂ ಕೊರೊನ 28 ಡಿಗ್ರಿಗಿಂತ ಹೆಚ್ಚಿನ ಬಿಸಿಲಿನ ತಾಪಮಾನದಲ್ಲಿ ಸಾಯುತ್ತೆ ಎಂದು ಭಾವಿಸಿದ್ದ ಜನ, ಮಳೆಯೇ ಬೇಡ ಕೊರೊನಾ ಬಾರದಿದ್ರೆ ಸಾಕು ಅಂತಿದ್ದರು.
ಕಾಫಿ ಗಿಡ ಹೂವಾಗುವ ಸಮಯವಾದ್ರಿಂದ ಕಾಫಿತೋಟದ ಮಾಲೀಕರು ಹಾಗೂ ರೈತರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಆದರೆ ಇಂದು ವರ್ಷದ ಮೊದಲ ಮಳೆಯೇ ಉತ್ತಮವಾಗಿ ಸುರಿದಿರೋದ್ರಿಂದ ಈ ವರ್ಷವೂ ಉತ್ತಮ ಮಳೆಯಾಗಲಿದೆ ಎಂದು ಭಾವಿಸಿದ್ದಾರೆ.