ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ (Charmadi Ghat) ಬಳಿಯ ನಿಷೇಧಿತ ಫಾಲ್ಸ್ ಒಂದರ ಬಳಿ ಪ್ರವಾಸಕ್ಕೆ ಬಂದಿದ್ದ ಯುವಕರು ಹುಚ್ಚಾಟ ಮಾಡಿದ್ದು, ಬಣಕಲ್ ಪೊಲೀಸರು (Banakal Police) ಯುವಕರ ಬಟ್ಟೆ ಹೊತ್ತೊಯ್ದು ಬುದ್ಧಿ ಕಲಿಸಿದ್ದಾರೆ.
ಜಲಪಾತದ ಬಳಿ ಇರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟರು ಯುವಕರು ಮಾತು ಕೇಳದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್.. ಬಟ್ಟೆ ಕೊಡಿ ಎಂದು ಓಡಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಹಗರಣ – ಬಳ್ಳಾರಿಯಲ್ಲಿ ನಾಗೇಂದ್ರ ಆಪ್ತರಿಗೆ ಡ್ರಿಲ್, 2 ಬ್ಯಾಗ್ ದಾಖಲೆಯೊಂದಿಗೆ ತೆರಳಿದ ಅಧಿಕಾರಿಗಳು
ಇದರಿಂದ ಪೇಚೆಗೆ ಸಿಲುಕಿದ ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗಳ ಬಳಿಕ ಯುವಕರು ಇನ್ನೂ ಹೀಗೆ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಬಳಿಕ ಪೊಲೀಸರು ಬಟ್ಟೆ ಕೊಟ್ಟು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಯ ಫಾಲ್ಸ್ ಒಂದರ ಬಳಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಕಾಲು ಜಾರಿ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದ. ಇನ್ನೂ ಶಿವಮೊಗ್ಗ ಜಿಲ್ಲೆಯ ಫಾಲ್ಸ್ ಒಂದರ ಬಳಿಯೂ ಮುಂಗಾರು ಆರಂಭದಲ್ಲಿ ಇದೇ ರೀತಿಯ ದುರ್ಘಟನೆ ಸಂಭವಿಸಿತ್ತು. ಇದನ್ನೂ ಓದಿ: ಮುಂದಿನ 25 ವರ್ಷದಲ್ಲಿ ಕಾವೇರಿ ಕೊಳ್ಳದಲ್ಲಿ ನೀರಿನ ತೀವ್ರ ಕೊರತೆ: ನೀತಿ ಆಯೋಗ