ರಾಜರ ಕಾಲದ ಕೋಟಿ ಮೌಲ್ಯದ ರತ್ನದ ಹರಳು ವಶ

Public TV
1 Min Read
CKM Police 1

ಚಿಕ್ಕಮಗಳೂರು: ಖೋಟಾನೋಟು ಚಲಾವಣೆ ಜಾಲದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿರುವ ಜಿಲ್ಲೆಯ ಸಿ.ಇ.ಎನ್. ಅಪರಾಧ ಠಾಣೆಯ ಪೊಲೀಸರು ಬಂಧಿತರಿಂದ ಸುಮಾರು ಒಂದು ಕೋಟಿ ಮೌಲ್ಯದ ಪುರಾತನ ಕಾಲದ ರತ್ನದ ಹರಳನ್ನ ವಶಪಡಿಸಿಕೊಂಡಿದ್ದಾರೆ.

2020ರ ಅಕ್ಟೋಬರ್ ನಲ್ಲಿ ಆಲ್ದೂರು ಪೊಲೀಸರು ನಕಲಿ ನೋಟು ಚಲಾವಣೆ ಜಾಲವೊಂದನ್ನು ಭೇದಿಸಿ ಹಲವರನ್ನ ಬಂಧಿಸಿ 5.5 ಲಕ್ಷ ರೂಪಾಯಿಗಳನ್ನ ವಶಪಡಿಸಿಕೊಂಡಿದ್ದರು. ಈ ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಉಪಕರಣಗಳ ಜೊತೆ 5 ಮೊಬೈಲ್ 3 ಕಾರುಗಳನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು.

CKM Police 1

ಬಂಧಿತ ಆರೋಪಿಗಳ ವಿರುದ್ಧ ಮಂಗಳೂರಿನ ಉಳ್ಳಾಲ ಹಾಗೂ ವಿಟ್ಲದಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಉಳ್ಳಾಲದಲ್ಲಿ 2.4 ಲಕ್ಷ ರೂಪಾಯಿಗಳನ್ನ ವಶಪಡಿಸಿಕೊಳ್ಳಲಾಗಿತ್ತು. ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಖರೀದಿಸುವ ನೆಪದಲ್ಲಿ 510 ಕ್ಯಾರೆಟ್ ನ ಸುಮಾರು 50 ಲಕ್ಷದಿಂದ 1 ಕೋಟಿ ರೂ ಬೆಲೆಬಾಳುವ ರತ್ನವೊಂದನ್ನು ಈ ವ್ಯಕ್ತಿಗಳು ಖರೀದಿಸುವ ನೆಪದಲ್ಲಿ ಮೋಸ ಮಾಡಿದ್ದರು. ವರ್ಷದ ಹಿಂದೆ ವ್ಯಕ್ತಿಯೋರ್ವನಿಂದ ರತ್ನವನ್ನ ಖರೀದಿಸುವ ವೇಳೆ ಮೋಸ ಮಾಡಿ ರತ್ನವನ್ನ ಕದ್ದಿದ್ದರು.

CKM Police 2

ನಮ್ಮ ಅಜ್ಜನಿಗೆ ಮಹಾರಾಜರು ನೀಡಿದ್ದ ರತ್ನ ಎಂದು ರತ್ನವನ್ನ ಕಳೆದುಕೊಂಡವರು ದೂರು ನೀಡಿದ್ದರು. ಇದೇ ವ್ಯಕ್ತಿಗಳು ಕೇರಳದಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದರು. ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ

ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್.ಠಾಣೆಯ ಇನ್ಸ್ ಪೆಕ್ಟರ್ ರಕ್ಷಿತ್ ಎ.ಕೆ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಈ ತಂಡಕ್ಕೆ ಪಶ್ಚಿಮ ವಲಯ ಐಜಿಪಿ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಮೇಲೆ ಗುಂಡಿನ ಮಳೆ – ನಾರ್ಥರ್ನ್ ಅಲಯನ್ಸ್‌ಗೆ ತಜಕಿಸ್ತಾನ ಬೆಂಬಲ

Share This Article
Leave a Comment

Leave a Reply

Your email address will not be published. Required fields are marked *