– ಕೇರಳ, ಆಂಧ್ರ ಭಾಗಕ್ಕೆ ತೆರಳಿರುವ ಶಂಕೆ
ಚಿಕ್ಕಮಗಳೂರು: ರಾಜ್ಯದಲ್ಲಿ 6 ಜನ ನಕ್ಸಲರು (Naxalite) ಶರಣಾದ ಬೆನ್ನಲ್ಲೇ, ವಿಕ್ರಂಗೌಡ ಎನ್‍ಕೌಂಟರ್ ಬಳಿಕ ಮುಂಡಗಾರು ಲತಾ ತಂಡದಿಂದ ದೂರ ಉಳಿದಿದ್ದ ರವೀಂದ್ರ (Naxal Ravindra) ನಾಪತ್ತೆಯಾಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
Advertisement
ಶೃಂಗೇರಿ ಕಿಗ್ಗಾ ಮೂಲದ ರವೀಂದ್ರ ಹಾಗೂ ಜಯಣ್ಣ ಮುಂಡಗಾರು ಲತಾ ಟೀಂನಲ್ಲಿದ್ದರು. ವಿಕ್ರಂಗೌಡ ಎನ್‍ಕೌಂಟರ್ ಬಳಿಕ ಟೀಂನಿಂದ ಇಬ್ಬರು ದೂರವಾಗಿದ್ದರು. ಈಗ ಲತಾ ಟೀಂನ ಐವರು ಸೇರಿದಂತೆ, ರಾಯಚೂರು ಮೂಲದ ಜಯಣ್ಣ ಅಲಿಯಾಸ್ ಮಾರೆಪ್ಪ ಅರೋಳಿ ಪೊಲೀಸರಿಗೆ ಶರಣಾಗಿದ್ದಾರೆ.
Advertisement
Advertisement
ಈಗ ಜಯಣ್ಣನ ಜೊತೆಗಿದ್ದ ರವೀಂದ್ರ ಎಲ್ಲಿ? ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಶರಣಾಗತಿ ಆಗುವುದಿಲ್ಲ ಎಂದು ದೂರ ಉಳಿದಿದ್ದಾನಾ ಎಂಬ ಪ್ರಶ್ನೆ ಅಧಿಕಾರಿಗಳಿಗೆ ಮೂಡಿದೆ.
Advertisement
ರವೀಂದ್ರ ಕೇರಳ ಅಥವಾ ಆಂಧ್ರ ಭಾಗಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.