ಚಿಕ್ಕಮಗಳೂರು: ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ತಾಯಿಯನ್ನು (Mother) ಕೊಂದು ಸುಟ್ಟು ಹಾಕಿ ಅಂದರ್ ಆಗಿರುವ ಆರೋಪಿ ಪವನ್, ತಿಂಗಳ ಹಿಂದೆ ಅಪ್ಪನ ಮೇಲೂ ಮೃಗೀಯ ವರ್ತನೆ ತೋರಿದ್ದ ಎಂಬುದು ಗೊತ್ತಾಗಿದೆ. ತಂದೆಯ ಮೇಲೂ ಲೆದರ್ ಬೆಲ್ಟ್‌ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದ ಎಂಬುದು ತಿಳಿದು ಬಂದಿದೆ.
ಪವನ್ ತನ್ನ ಅಪ್ಪನ ಬೆನ್ನಿನ ಚರ್ಮ ಸುಲಿಯುವಂತೆ ಬೆಲ್ಟ್‌ನಿಂದ ಹೊಡೆದಿದ್ದ. ನಿತ್ಯ ಕೂಲಿ ಕೆಲಸ ಮಾಡೋದು ಸಂಜೆ ಕುಡಿದು ಬಂದು ಅಪ್ಪ-ಅಮ್ಮನನ್ನ ಹೊಡೆಯೋದು ಇವನ ಕಾಯಕವಾಗಿತ್ತು. ಹೆತ್ತವರು ಕೂಡ ಮಗನೆಂಬ ಮಮಕಾರದಿಂದ ಪೊಲೀಸರಿಗೂ ದೂರು ನೀಡಿರಲಿಲ್ಲ. ಅಲ್ಲದೇ ಯಾರಿಗೂ ಹೇಳಿರಲಿಲ್ಲ. ಆದರೂ ಈ ವಿಷಯ ತಿಳಿದ ಸ್ಥಳೀಯರು ಪವನ್‌ಗೆ ಬುದ್ಧಿವಾದ ಹೇಳಿದ್ದರು. ಆದರೂ, ಕುಡಿದು ಅಪ್ಪ-ಅಮ್ಮನಿಗೆ ಹೊಡೆಯುವುದನ್ನು ಬಿಟ್ಟಿರಲಿಲ್ಲ. ಈಗ ಆತನ ದುಷ್ಕೃತ್ಯದಿಂದ ಪೊಲೀಸರ ಅತಿಥಿ ಆಗಿದ್ದಾನೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್
ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಆರೋಪಿ ಪವನ್ ಕಳೆದ ರಾತ್ರಿ ಕುಡಿದು ಬಂದು ತಾಯಿ ಭವಾನಿ (52) ಜೊತೆ ಗಲಾಟೆ ಮಾಡಿ ಕೊಂದು ಮನೆಯಲ್ಲೇ ಸುಟ್ಟು ಹಾಕಿದ್ದ. ಈ ವೇಳೆ ಕುಡಿದ ಮತ್ತಿನಲ್ಲಿ ಬೆಂಕಿ ಹಚ್ಚಿದ್ದ ಮೃತದೇಹದ ಪಕ್ಕದಲೇ ಮಲಗಿದ್ದ. ಅಪ್ಪನಿಂದ ವಿಷಯ ತಿಳಿದು ಸ್ಥಳೀಯರು ಬೆಂಕಿ ನಂದಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಳಿದ ಸಾರಿಗೆ ಬಸ್ – ಪ್ರಯಾಣಿಕರು ಸೇಫ್