Chikkamagaluru

ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ ಪಾಪಿ ಪುತ್ರ!

Published

on

Share this

ಚಿಕ್ಕಮಗಳೂರು: ಆತ ಒಂದು ರೀತಿಯಲ್ಲಿ ನಾರ್ಮಲ್. ಮತ್ತೊಂದು ರೀತಿಯಲ್ಲಿ ಅಬ್ನಾರ್ಮಲ್. ಆ ತಾಯಿಗಿದ್ದ ಇಬ್ಬರು ಪುತ್ರರಲ್ಲಿ ಆತನೇ ಹಿರಿಯವ. ಬದುಕಿ-ಬಾಳಬೇಕಿದ್ದ ನನ್ನ ಕಂದ ಹೀಗಾದ್ನಲ್ಲ ಅಂತ ಆ ತಾಯಿ ಹೋಗದ ದೇವಾಲಯವಿಲ್ಲ, ಮಾಡದ ಪೂಜೆಯಿಲ್ಲ. ನಿನ್ನೆಯೂ ಕೂಡ ನನ್ನ ಮಗ ಎಲ್ಲರಂತಾಗಲಿ ಎಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮಗನಿಗಾಗಿ ಪೂಜೆ ಮಾಡಿಸಿಕೊಂಡು ಬಂದಿದ್ರು. ಎಲ್ಲಾ ಒಳ್ಳೆದಾಗುತ್ತೆ ಅಂದುಕೊಂಡಿದ್ದ ಆಕೆಗೆ ಮಗನೇ ಕಂಟಕವಾಗಿದ್ದಾನೆ. ಹೆತ್ತಮ್ಮ ಅನ್ನೋದನ್ನ ಕಿಂಚಿತ್ತೂ ಯೋಚನೆ ಮಾಡದೆ ಕರುಣೆ ಇಲ್ಲದವನಂತೆ ಕೊಚ್ಚಿ ಕೊಲೆಗೈದಿದ್ದಾನೆ.

ಹೌದು. ಚಿಕ್ಕಮಗಳೂರು ನಗರದ ಗೌರಿಕಾಲುವೆಯಲ್ಲಿ ನಡೆದ ಮಹಿಳೆ ಕೊಲೆ ವಿಚಾರ ನಗರವನ್ನೇ ಬೆಚ್ಚಿ ಬೀಳಿಸಿತು. ಮಗನೇ ಹೆತ್ತ ತಾಯಿಯನ್ನ ಕೊಚ್ಚಿ ಕೊಲೆಗೈದಿರೋದನ್ನ ಕೇಳಿ ಜನ ಶಾಕ್ ಆಗಿದ್ರು. ಆ ನತದೃಷ್ಟ ತಾಯಿ ಹೆಸ್ರು ಸುಧಾ(48). ಅಮ್ಮನನ್ನೇ ಕೊಚ್ಚಿ ಕೊಂದ ಮಗ ದುಶ್ಯಂತ(28). ಬುಧವಾರ ಮಧ್ಯಾಹ್ನ ಕೊಲೆ ಮಾಡಿ ಸಂಜೆವರೆಗೂ ಶವದ ಜೊತೆಯಲ್ಲೇ ಇದ್ದನು. ಸುಧಾರ ಕಿರಿಯ ಮಗ ಸಂತೋಷ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಹಾಕಿತ್ತು. ಬಾಗಿಲು ತೆಗೆಯುವಂತೆ ಅಣ್ಣನಿಗೆ ಹೇಳಿದಾಗ ಕಂಡಿದ್ದು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ. ಕೂಡಲೇ ಎದ್ದೇಳು ಅಮ್ಮ ಅಂತಾ ಕಿರಿಯ ಪುತ್ರ ಕಿರುಚಾಡಿದ್ದಾನೆ. ಪ್ರಜ್ಞೆ ಹೋಗಿರಬಹುದೆಂದು ಎಬ್ಬಿಸಲು ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆ ಉಸಿರು ಚೆಲ್ಲಿ ಅದೆಷ್ಟೋ ಹೊತ್ತಾಗಿತ್ತು. ವಿಚಾರ ತಿಳಿದು ಇಡೀ ಏರಿಯಾನೇ ದಿಗ್ಭ್ರಮೆಗೊಳಗಾಗಿತ್ತು.

ಮೂಲತಃ ಚಿಕ್ಕಮಗಳೂರು ಸಮೀಪದ ಇಂದಾವರ ನಿವಾಸಿಯಾಗಿದ್ದ ಸುಧಾ, ಇತ್ತೀಚಿಗೆ ಅಪಘಾತದಲ್ಲಿ ಪತಿಯನ್ನ ಕಳೆದುಕೊಂಡಿದ್ರು. ಹೀಗಾಗಿ ಎರಡು ವರ್ಷಗಳಿಂದ ನಗರದ ಗೌರಿಕಾಲುವೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪ್ರಾವಿಷನ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಎಂಜಿನಿಯರಿಂಗ್ ಓದಿದ್ದ ಕಿರಿ ಮಗ, ಸದ್ಯ ವರ್ಕ್ ಫ್ರಮ್ ಹೋಂ ಕೆಲಸ ಮಾಡಿಕೊಂಡು ತಾಯಿಗೆ ನೆರವಾಗಿದ್ದ. ಇನ್ನೂ ಹಿರಿಮಗ ಸ್ವಲ್ಪ ಅಬ್ನಾರ್ಮಲ್ ಆಗಿ ವರ್ತನೆ ಮಾಡ್ತಿದ್ದರಿಂದ ಅವನನ್ನ ಸಂಬಾಳಿಸೋದು ಸುಧಾರಿಗೆ ದೊಡ್ಡ ಸವಾಲಾಗಿತ್ತು. ಮಾತು ಮಾತಿಗೂ ಕೋಪ. ಅವನನ್ನ ಸರಿ ಮಾಡಬೇಕು ಅಂತ ಹೆತ್ತಮ್ಮ ಮಾಡಿದ್ದ ಸಾಹಸ ಅಷ್ಟಿಷ್ಟಲ್ಲ. ತೋರಿಸದ ಆಸ್ಪತ್ರೆಗಳಿಲ್ಲ, ಹೋಗದ ದೇವಾಲಯಗಳಿಲ್ಲ. ನಿನ್ನೆಯೂ ಕೆಲಸಕ್ಕೆ ರಜೆ ಹಾಕಿ ದೇವಸ್ಥಾನಕ್ಕೆ ಹೋಗಿ ಮಗನಿಗಾಗಿ ಪೂಜೆ ಮಾಡಿಸಿಕೊಂಡು ಬಂದಿದ್ರು. ತಾಯಿ-ಮಗ ಮನೆಗೆ ಬಂದ್ಮೇಲೆ ನಡೆದಿದ್ದು ಘೋರ ದುರಂತ. ಇದನ್ನೂ ಓದಿ:  ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

ಒಟ್ಟಾರೆ ಅಪ್ಪ ಇಲ್ಲದಿದ್ದರೂ ಮಕ್ಕಳಿಗೆ ತಂದೆ ಕೊರಗು ಕಾಡದಂತೆ ಸಾಕಿದ್ರು ಸುಧಾ. ಪ್ರತಿದಿನ ಕೆಲಸಕ್ಕೆ ಹೋಗುವಾಗ ಹಿರಿ ಮಗ ದುಶ್ಯಂತನಿಗೆ ಚಿಕ್ಕ ಮಕ್ಕಳಂತೆ ತಿಂಡಿ-ಕುರ್ ಕುರೆ ಎಲ್ಲವನ್ನೂ ಕೊಟ್ಟು ಹೋಗ್ತಿದ್ರು. ಕೆಲ ಸ್ಥಳೀಯರು ಹೇಳೋ ಪ್ರಕಾರ ದುಶ್ಯಂತ್ ಹೊರಗಡೆಯವರ ಜೊತೆ ಚೆನ್ನಾಗಿಯೇ ಇರುತ್ತಿದ್ದ. ಆದರೆ ಮನೆಯಲ್ಲಿ ಮಾತ್ರ ಕೋಪ ಮಾಡಿಕೊಳ್ತಿದ್ನಂತೆ. ಆತ ನಿಜಕ್ಕೂ ಅಬ್ ನಾರ್ಮಲ್ ಆಗಿದ್ನೋ ಅಥವ ನಾಟಕವೋ ಯಾರಿಗೂ ಗೊತ್ತಿಲ್ಲ. ಆದರೆ ಈ ಮಧ್ಯೆ ಹೆತ್ತು-ಹೊತ್ತು ಸಾಕಿ ಸಲಹಿದ್ದ ಹೆತ್ತಮ್ಮನನ್ನೇ ಕೊಚ್ಚಿ ಕೊಲೆಗೈದ ಆತನ ದುರ್ಬುದ್ಧಿಗೆ ಏನೇನ್ನಬೇಕೋ ಗೊತ್ತಿಲ್ಲ.

Click to comment

Leave a Reply

Your email address will not be published. Required fields are marked *

Advertisement
Advertisement