ಚಿಕ್ಕಮಗಳೂರು: ಪಟ್ಟಣ ಪ್ರದೇಶದಲ್ಲಿರೋ ರೈತರು ಗ್ರಾಮೀಣ ಭಾಗದ ಹೊಲ-ಗದ್ದೆಗಳಿಗೆ ಹೋಗಲು ತೊಂದರೆ ಆಗ್ತಿದ್ದು, ಹೊಲ-ಗದ್ದೆಗಳಿಗೆ ಹೋಗುವ ಯಾವ ರೈತರಿಗೂ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.
ಜಿಲ್ಲೆಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ರೈತರ ಸಮಸ್ಯೆ ಕುರಿತಂತೆ ಚರ್ಚೆ ನಡೆಸಿ ಮಾತನಾಡಿದ ಅವರು, ಸ್ಥಳೀಯ ಅಧಿಕಾರಿಗಳನ್ನ ಬಳಸಿಕೊಂಡು ರೈತರಿಗೆ ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದರು.
Advertisement
Advertisement
ಈ ವರ್ಷ ಚಿಕ್ಕಮಗಳೂರು ಜಿಲ್ಲೆಗೆ ಕೃಷಿ ಬಿತ್ತನೆಗೆ ಬೇಕಾದ ಬೀಜ ಹಾಗೂ ಗೊಬ್ಬರವನ್ನ ಸರಬರಾಜು ಮಾಡಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ರೀತಿಯ ತೊಂದರೆ ಹಾಗೂ ದಾಸ್ತಾನಿನ ಕೊರತೆ ಇರುವುದಿಲ್ಲ. ಹಾಗಾಗಿ ಮಳೆ ಬಿದ್ದ ಬಳಿಕ ರೈತರು ತಮ್ಮ ಬಿತ್ತನೆ ಕಾರ್ಯವನ್ನ ಪ್ರಾರಂಭ ಮಾಡುಬಹುದು ಎಂದಿದ್ದಾರೆ.
Advertisement
ಕೃಷಿಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗೂ ನಿರ್ಬಂಧ ಇಲ್ಲದಂತೆ ನಡೆಯಬೇಕು. ಅದಕ್ಕೆ ಪೂರಕವಾಗಿ ಟ್ರ್ಯಾಕ್ಟರ್ ರಿಪೇರಿ ಮಾಡುವ ಗ್ಯಾರೇಜ್ ಹಾಗು ಬೋರ್ ತೆಗೆಸಿದರೆ ಅದಕ್ಕೆ ಬೇಕಾದ ಮೆಷಿನ್, ಪೈಪ್‍ಗಳು ಹಾಗೂ ಸ್ಪ್ರಿಂಕ್ಲರ್ ಪೈಪ್‍ಗಳ ಎಲ್ಲಾ ಅಂಗಡಿ ತೆರೆಯಲು ಸೂಚಿಸಿದ್ದೇವೆ. ಸಾಮಾಜಿಕ ಅಂತರದೊಂದಿಗೆ ಎಲ್ಲವನ್ನು ನಡೆಸಿಕೊಂಡು ಹೋಗುವಂತೆ ರೈತ ಸಮುದಾಯಕ್ಕೆ ಮನವಿ ಮಾಡಿದ್ದಾರೆ.