ಚಿಕ್ಕಮಗಳೂರು: ಮದ್ಯ ಕುಡಿಯಲು ಹಣ ಕೊಡದಿದ್ದಕ್ಕೆ ಪತಿಯೊಬ್ಬ ಪತ್ನಿಯ ತಲೆಯನ್ನು ಕಲ್ಲಿನಿಂದ ಜಜ್ಜಿರುವಂತಹಾ ಘಟನೆ ಕೊಪ್ಪ ತಾಲೂಕಿನ ನುಗ್ಗಿ ಗ್ರಾಮದ ದೇವನ್ ಎಸ್ಟೇಟ್ ಬಳಿ ನಡೆದಿದೆ.
ಪತಿ ರಾಜನ್ನಿಂದ ಹಲ್ಲೆಗೊಳಗಾಗದ ಪತ್ನಿ ಶಾಂತಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಮದ್ಯದ ಚಟಕ್ಕೆ ಬಿದ್ದಿದ್ದ ರಾಜನ್ ಆಗಾಗ ಪತ್ನಿಯ ಬಳಿ ಮದ್ಯ ಕುಡಿಯುವುದಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ. ಪತಿಯ ಹಿಂಸೆ ತಾಳಲಾರದೆ ಶಾಂತ ಮಗಳ ಮನೆಯಲ್ಲಿ ಮಗಳು ಹಾಗೂ ಅಳಿಯನ ಜೊತೆ ಇದ್ದರು.
Advertisement
Advertisement
ಮಗಳ ಮನೆಯಿಂದಲೇ ಶಾಂತಾ ನುಗ್ಗಿ ಗ್ರಾಮದ ದೇವನ್ ಎಸ್ಟೇಟ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಪತಿ ರಾಜನ್ ಭಾನುವಾರ ಬೆಳಗ್ಗೆ ಕೆಲಸಕ್ಕೆ ಹೋಗುವಾಗುತ್ತಿದ್ದ ಶಾಂತಾ ಅವರನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ್ದ. ನೀನು ನನಗೆ ಕುಡಿಯಲು ಹಣ ನೀಡುವುದಿಲ್ಲ ಎಂದು ಜಡೆಯನ್ನು ಹಿಡಿದು ದಾರಿಯಲ್ಲಿ ಎಳೆದಾಡಿ, ಕಲ್ಲಿನಿಂದ ತಲೆಗೆ ಜಜ್ಜಿದ್ದಾನೆ. ಆಗ ಶಾಂತ ಕೂಗಾಡುತ್ತಿದ್ದಿದ್ದನ್ನ ಕೇಳಿಸಿಕೊಂಡ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದರು. ಈ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
Advertisement
ಸ್ಥಳೀಯರು ಶಾಂತಾ ಅವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಸದಾ ಕುಡಿದು ಬಂದು ದುಡ್ಡಿಗಾಗಿ ಪೀಡಿಸುತ್ತಿದ್ದ ಮಾವ ಅತ್ತೆಯನ್ನ ಕೊಲೆ ಮಾಡಲು ಯತ್ನಸಿದ್ದಾರೆ ಎಂದು ಶಾಂತಾ ಅವರ ಅಳಿಯ ಹರೀಶ್ ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ರಾಜನ್ ವಿರುದ್ಧ ಕೊಪ್ಪ ಠಾಣೆಯಲ್ಲಿ ಕೇಸ್ ದಾಖಲಾಗಿದೆ.