ಚಿಕ್ಕಮಗಳೂರು: ಹುಟ್ಟುಹಬ್ಬವನ್ನ ಪ್ರತಿಯೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಕೆಲವರು ದೇವಸ್ಥಾನಕ್ಕೆ ಹೋಗ್ತಾರೆ. ಕೆಲವರು ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ತಾರೆ. ನಗರದ ಸಮಾಜ ಸೇವಾ ಕಾರ್ಯಕರ್ತನೋರ್ವ, ಸ್ನಾನವಿಲ್ಲದೆ ನಗರದ ಬಸ್‍ನಿಲ್ದಾಣದಲ್ಲಿ ವಾಸವಾಗಿದ್ದ ವ್ಯಕ್ತಿಯನ್ನು ಬದಲಾಯಿಸಿದ್ದಾರೆ.
Advertisement
ಕಲರಬುರಗಿ ಮೂಲಕ ಮುರಳಿ ಎಂಬಾತ ಬೇಲೂರು ರಸ್ತೆಯ ಬಸ್ ನಿಲ್ದಾಣದಲ್ಲಿಯೇ ವಾಸವಾಗಿದ್ದನು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸದಸ್ಯೆ ಸಹನಾ ಈ ಮಾನಸಿಕ ಅಸ್ವಸ್ಥನನ್ನು ಗಮನಿಸಿ ಪತಿ ರೂಬೆನ್ ಮೊಸೆಸ್ ಅವರಿಗೆ ತಿಳಿಸಿದ್ದರು. ಮಂಗಳವಾರ ತಮ್ಮ ಹುಟ್ಟುಹಬ್ಬ ಮತ್ತು ವಿಶ್ವ ಸಮಾಜ ಸೇವಾ ದಿನ ಪ್ರಯುಕ್ತ ವ್ಯಕ್ತಿಯನ್ನು ಶುಚಿಗೊಳಿಸಿದ್ದಾರೆ.
Advertisement
Advertisement
ಮಂಗಳವಾರ ಕಟಿಂಗ್ ಶಾಪ್ ಬಂದಾಗಿದ್ದರಿಂದ ತಾವೇ ಮುರಳಿಯ ಕುರುಚಲು ಕೂದಲಿಗೆ ಕತ್ತರಿ ಹಾಕಿದ್ದಾರೆ. ಮುರಳಿಗೆ ಕಟಿಂಗ್ ಮತ್ತು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿದ್ದಾರೆ. ನಂತರ ಮುರಳಿಗೆ ಊಟ ನೀಡಿ, ಆತ ವಾಸವಾಗಿದ್ದ ಬಸ್ ನಿಲ್ದಾಣ ಸಹ ಶುಚಿಗೊಳಿಸಿದ್ದಾರೆ. ಈ ಮಾನವೀಯತೆ ಕೆಲಸಕ್ಕೆ ರೊಬೆಲ್ ಅವರ ಸ್ನೇಹಿತರು ಸಹ ಸಾಥ್ ನೀಡಿದ್ದಾರೆ.