ಚಿಕ್ಕಮಗಳೂರು: ವರದಕ್ಷಿಣೆಗಾಗಿ (Dowry) ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು (Wife) ವಿವಸ್ತ್ರಗೊಳಿಸಿ ಮನಸೋ ಇಚ್ಛೆ ಹಲ್ಲೆ ನಡೆಸಿರುವುದು ತರಿಕೆರೆ ತಾಲೂಕಿನ ನಂದಿಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಿಳೆ ಗ್ರಾಮದ ತಿಮ್ಮಪ್ಪನನ್ನು 2014ರಲ್ಲಿ ಪ್ರೀತಿಸಿ ಮದುವೆಯಾಗಿದ್ದಳು. 2 ಮಕ್ಕಳಾದ ಬಳಿಕ ತವರಿಗೆ ಹೋಗಿ ಹಣ ತರುವಂತೆ ತಿಮ್ಮಪ್ಪ ತನ್ನ ಪತ್ನಿಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಹಲ್ಲೆಯಿಂದಾಗಿ ಮಹಿಳೆಯ ಮೈಯೆಲ್ಲ ಕಪ್ಪು ಬಣ್ಣಕ್ಕೆ ತಿರುಗಿದೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಪತ್ನಿ ಮೇಲೆ GBA ಮಾರ್ಷಲ್ ದರ್ಪ ಆರೋಪ – ಮಹಿಳೆ ನೇಣಿಗೆ ಶರಣು
ಅಷ್ಟೇ ಅಲ್ಲದೇ ಅಪ್ಪ-ಅಣ್ಣನ ಮಾತು ಕೇಳಿಕೊಂಡು ನಿತ್ಯ ಕುಡಿದು ಬಂದು, ಬೇರೆ ಮದುವೆಯಾಗಬೇಕು, ಬರೀ ಹೆಣ್ಣು ಮಕ್ಕಳಿರೋದು, ಮನೆ ಬಿಟ್ಟು ಹೋಗು ಎಂದು ನಿಂದಿಸುತ್ತಿದ್ದನಂತೆ. ಹಲ್ಲೆ ನಡೆಸಿ ಪತ್ನಿಯನ್ನ ವಿವಸ್ತ್ರಗೊಳಿಸಿ ಮನೆಯಲ್ಲೇ ಕೂಡಿ ಹಾಕಿದ್ದನಂತೆ. ಮನೆ ಹಿಂದಿನಿಂದ ಓಡಿಹೋಗಿ ದಾರಿಯಲ್ಲಿ ಸಿಕ್ಕ ಬಟ್ಟೆಯಲ್ಲಿ ಮೈಮುಚ್ಚಿಕೊಂಡು ಮಹಿಳೆ ಅಲ್ಲಿಂದ ಪಾರಾಗಿದ್ದಾಳೆ.
ಈ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ (Husband) ಸೇರಿ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೈದುನನ ಜೊತೆ ಮಲಗೋಕೆ ಒತ್ತಾಯಿಸ್ತಿದ್ರು, ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದಾರೆ – ವಿಡಿಯೋ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

